ಗುಂಡ್ಯದಲ್ಲಿ ತಂದೆ ಮಗನಿಗೆ ಒಂಟಿ ಸಲಗ ದಾಳಿ; ತಂದೆ ಸಾವು ಮಗ ಗಂಭೀರ
Sunday, January 1, 2023
ಪುತ್ತೂರು;ಮೀನು ಹಿಡಿಯಲೆಂದು ಹೊಳೆಗೆ ತೆರಳಿದ್ದ ತಂದೆ ಮಗನಿಗೆ ಒಂಟಿ ಸಲಗ ದಾಳಿ ಮಾಡಿದ್ದು, ತಂದೆ ಸಾವನ್ನಪ್ಪಿ ಮಗ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ಗುಂಡ್ಯ ಹೊಳೆಯಲ್ಲಿ ಸಂಭವಿಸಿದೆ.
ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿ ತಿಮ್ಮಪ್ಪ (45)ಮೃತ ವ್ಯಕ್ತಿ. ಅವರ ಪುತ್ರ ಶರಣ್ ಗಂಭೀರ ಗಾಯಗೊಂಡು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗ ಶರಣ್ ಮೀನು ಹಿಡಿಯಲು ಗುಂಡ್ಯ ಹೊಳೆ ಬದಿಗೆ ಹೋಗಿದ್ದ ವೇಳೆ, ಅಲ್ಲಿಗೆ ಬಂದಿದ್ದ ಒಂಟಿ ಸಲಗ ಶರಣ್ ಮೇಲೆ ದಾಳಿಗೆ ಮುಂದಾಗಿದೆ.
ಈ ವೇಳೆ ಮಗನ ರಕ್ಷಣೆಗೆ ಓಡಿ ಬಂದ ತಿಮ್ಮಪ್ಪ ಅವರನ್ನು ಆನೆ ಸೊಂಡಿಲಿನಿಂದ ಕೆಡವಿದ್ದು ಬಳಿಕ ತುಳಿದು ಹಾಕಿದೆ. ಗಂಭೀರ ಗಾಯಗೊಂಡ ತಿಮ್ಮಪ್ಪ ಅವರನ್ನುವಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆಗೆ ಸ್ಪಂದಿಸದೆ ತಿಮ್ಮಪ್ಪ ಸಾವನ್ನಪ್ಪಿದ್ದಾರೆ. ನೆಲ್ಯಾಡಿ ಪೊಲೀಸ್ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.