ಮಂಗಳೂರು: ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ನಾಲ್ವರು ಬಜರಂಗದಳದ ಕಾರ್ಯಕರ್ತರು ಅರೆಸ್ಟ್

ಮಂಗಳೂರು: ಜ್ಯುವೆಲ್ಲರಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ನಾಲ್ವರು ಬಜರಂಗದಳದ ಕಾರ್ಯಕರ್ತರು ಅರೆಸ್ಟ್

ಮಂಗಳೂರು: ನಗರದಲ್ಲಿ ಕಂಕನಾಡಿಯ ಜ್ಯುವೆಲ್ಲರಿಯಲ್ಲಿ ನಡೆದಿರುವ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ನಾಲ್ವರು ಕಾರ್ಯಕರ್ತರ ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಶಿಬಿನ್, ಗಣೇಶ್, ಪ್ರಕಾಶ್ ಮತ್ತು ಚೇತನ್ ಬಂಧಿತ ಬಜರಂಗದಳದ ಕಾರ್ಯಕರ್ತರು.

ನಗರದ ಕಂಕನಾಡಿಯಲ್ಲಿರುವ ಸುಲ್ತಾನ್ ಗೋಲ್ಡ್ ಆಭರಣ ಮಳಿಗೆಯಲ್ಲಿ ಕೆಲಸಕ್ಕಿದ್ದ ಹಿಂದೂ ಯುವತಿ ಅದೇ ಜ್ಯುವೆಲ್ಲರಿಯಲ್ಲಿ ನೌಕರನಾಗಿದ್ದ ಮುಸ್ಲಿಂ ಯುವಕನೊಂದಿಗೆ ಬೈಕ್ ನಲ್ಲಿ ಓಡಾಡುತ್ತಿದ್ದಾಳೆ. ಆತ ಲವ್ ಜಿಹಾದ್ ಮಾಡುತ್ತಿದ್ದಾನೆಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಡಿಸೆಂಬರ್ ಆರರಂದು ಜ್ಯುವೆಲ್ಲರಿಗೆ ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರ ಮುಂಭಾಗವೇ ಬಜರಂಗದಳದ ಕಾರ್ಯಕರ್ತರು ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳದ ಕಾರ್ಯಕರ್ತರ ‌ಮೇಲೆ ಐಪಿಸಿ ಸೆಕ್ಷನ್ 323, 448, 504, 143, 147, 149 ರಡಿ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

Ads on article

Advertise in articles 1

advertising articles 2

Advertise under the article