ಮಂಗಳೂರು: ಅನಾರೋಗ್ಯ ಪೀಡಿತೆ ಪತ್ನಿಯನ್ನು ಹತ್ಯೆಗೈದು ಸಾವಿಗೆ ಶರಣಾದ ಪತಿ
Saturday, January 28, 2023
ಮಂಗಳೂರು: ಅನಾರೋಗ್ಯ ಪೀಡಿತೆ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದು ಪತಿ ಸಾವಿಗೆ ಶರಣಾದ ಹೈದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ನಡೆದಿದೆ
ನಗರದ ಕಾಪಿಕಾಡು ನಿವಾಸಿ ದಿನೇಶ್ ರಾವ್ (65) ಪತ್ನಿ ಶೈಲಜಾ (64) ಮೃತಪಟ್ಟವರು.
ದಿನೇಶ್ ರಾವ್ ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದವರು. ಪತ್ನಿ ಶೈಲಜಾ ರಾವ್ ಅವರು ಐದಾರು ವರ್ಷಗಳಿಂದ ನರರೋಗದ ಹಿನ್ನೆಲೆಯಲ್ಲಿ ಮಲಗಿದ್ದಲ್ಲೇ ಇದ್ದರು. ಇಬ್ಬರು ಹೋಮ್ ನರ್ಸ್ ನವರು ಅವರನ್ನು ಶೈಲಜಾ ರಾವ್ ರವನ್ನು ಶುಶ್ರೂಷೆ ಮಾಡುತ್ತಿದ್ದರು. ಬೆಳಗ್ಗೆ ಒಬ್ಬರು, ರಾತ್ರಿ ಒಬ್ಬರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇಬ್ಬರೂ ಇರದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇಂದು ಬೆಳಗ್ಗೆ ಪತ್ನಿಯನ್ನು ಕೊಲೆಗೈದು ಪತಿ ದಿನೇಶ ರಾವ್ ಸಾವಿಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ದಂಪತಿಗೆ ಇಬ್ಬರು ಪುತ್ರಿಯರಿದ್ದು, ಓರ್ವಾಕೆ ಅಮೇರಿಕಾದಲ್ಲಿದ್ದರೆ, ಮತ್ತೊಬ್ಬರು ಮೈಸೂರಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ