ರಾಯಚೂರು:ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಕೃತ ಕಾಮಿ ಅರೆಸ್ಟ್

ರಾಯಚೂರು:ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವಿಕೃತ ಕಾಮಿ ಅರೆಸ್ಟ್

ರಾಯಚೂರು: ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆಯೇ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಅಮಾನುಷ, ಘಟನೆ ರಾಯಚೂರಿನ ಕಸಬಾ ಲಿಂಗಸಗೂರು ಗ್ರಾಮದಲ್ಲಿ ನಡೆದಿದಿದೆ. ವ್ರತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ಇಮ್ಮಿಯಾಜ್ (24) ಎಂಬ ವಿಕೃತ ಕಾಮುಕ ಈ ಹೇಯ ಕೃತ್ಯ ನಡೆಸಿದಾತ.

ಲಿಂಗಸಗೂರು ಗ್ರಾಮದ ಅಮರೇಶ ಎಂಬವರಿಗೆ ಗ್ರಾಮದ ಅಮೀನ ದರ್ಗಾದ ಪಕ್ಕದಲ್ಲಿ ಗದ್ದೆಯಿದೆ. ಅಮರೇಶ ಅವರು ತಮ್ಮ ಹೊಲದ ಬದಿಯಲ್ಲೇ ಒಂದು ಕೊಟ್ಟಿಗೆಯನ್ನು ಕಟ್ಟಿಕೊಂಡು ಅಲ್ಲಿ ಏಳೆಂಟು ದನವನ್ನು ಸಾಕುತ್ತಿದ್ದರು. ದಿನವಿಡೀ ಅಲ್ಲೇ ವಾಸ್ತವ್ಯ ಇದ್ದು ರಾತ್ರಿ ಕೂಡಾ ಅಲ್ಲೇ ಮಲಗುತ್ತಿದ್ದರು.ಊಟ ಮತ್ತು ಸ್ನಾನ ಶೌಚಾದಿಗಳಿಗಷ್ಟೇ ಮನೆಗೆ ಹೋಗುತ್ತಿದ್ದರು. 

ಡಿಸೆಂಬರ್ 31ರ ರಾತ್ರಿಯೂ ಕೊಟ್ಟಿಗೆಯಲ್ಲೇ ಮಲಗಿದ್ದ ಅಮರೇಶ ಅವರು ಬೆಳಗ್ಗೆ ದನಗಳಿಗೆ ಆಹಾರ ನೀಡಿ, ಸ್ನಾನ ಮತ್ತು ತಿಂಡಿ ಮಾಡಿಕೊಂಡಿಕೊಂಡು ಬರಲೆಂದು ಮನೆಗೆ ತೆರಳಿದ್ದರು. ಹಾಗೆ ತೆರಳಿದವರು ಬೆಳಗ್ಗೆ 7.30ರ ಸಮಯಕ್ಕೆ ಮರಳಿದ್ದಾರೆ.

ಬಂದು ನೋಡುವ ವೇಳೆ ಇಮ್ಮಿಯಾಜ್ ಒಂದು ದನದ ಕರುವನ್ನು ನೆಲಕ್ಕೆ ಕೆಡವಿ ಅದರ ಕೈ ಕಾಲು ಗಳನ್ನು ಹಗ್ಗದಿಂದ ಕಟ್ಟಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ಕಂಡುಬಂತು. 
ಇಯ್ತಿಯಾಜ್ ನ ಪೈಶಾಚಿಕ ಕೃತ್ಯ ಕಣ್ಣಾರೆ ಕಂಡ ಅಮರೇಶ ಕೂಡಲೇ ಆತನನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೆಕ್ಷನ್ 377ರ ಅಡಿ ಅನೈಸರ್ಗಿಕ ಲೈಂಗಿಕ ಸಂಬಂಧದ ಕಾಲಂನಡಿಯಲ್ಲಿ ಇಮ್ಮಿಯಾಜ್ ಮೇಲೆ ಕೇಸು ದಾಖಲಾಗಿದೆ.

Ads on article

Advertise in articles 1

advertising articles 2

Advertise under the article