Mangalore: ಚಿಪ್ಸ್ ತಯಾರಿಕಾ ಫ್ಯಾಕ್ಟರಿ ಬೆಂಕಿಗಾಹುತಿ;ಯೆಯ್ಯಾಡಿ ಕೈಗಾರಿಕಾ ಸಂಕೀರ್ಣದಲ್ಲಿ ನಡೆದ ಘಟನೆ
Thursday, January 5, 2023
ಮಂಗಳೂರು: ನಗರದ ಯೆಯ್ಯಾಡಿ ಕೈಗಾರಿಕಾ ವಲಯದಲ್ಲಿ ಬೆಂಕಿ ಆಕಸ್ಮಿಕ ನಡೆದಿದೆ. ಚಿಪ್ಸ್ ತಯಾರಿಕ ಕಾರ್ಖಾನೆಯಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿದ್ದು ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.
ಸಂಜೆ 5 ಗಂಟೆ ವೇಳೆಗೆ ನೋಡ ನೋಡುತ್ತಲೇ ಫ್ಯಾಕ್ಟರಿ ಧಗ ಧಗನೆ ಹೊತ್ತಿ ಉರಿದಿದೆ. ಏಸ್ ಫುಡ್ಸ್ ಪ್ರೈವೇಟ್ ಲಿ. ಹೆಸರಿನ ಚಿಪ್ಸ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಉಂಟಾಗಿದ್ದು ಒಳಗೆ ದಾಸ್ತಾನು ಮಾಡಿದ್ದ ಚಿಪ್ಸ್ ಇನ್ನಿತರ ಆಹಾರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.