Mangalore: ರಾಹುಲ್ ಗಾಂಧಿಯ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಶಾಸಕ ಯುಟಿ ಖಾದರ್ ಯಾಮಾರಿಸಲು ಯತ್ನ ; ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Monday, January 2, 2023
ಮಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿಎ ಎಂದು ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಅವರನ್ನು ಯಾಮಾರಿಸಲು ಯತ್ನಿಸಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಹುಲ್ ಗಾಂಧಿ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಅಪರಿಚಿತನಿಂದ ಯುಟಿ ಖಾದರ್ ಗೆ ಮಧ್ಯಾಹ್ನ 1.33ರ ಸುಮಾರಿಗೆ 8146006626 ನಂಬರಿನಿಂದ ಎರಡು ಸಲ ಕರೆ ಬಂದಿದೆ.ಟಿ.ಖಾದರ್ ಮೀಟಿಂಗ್ ನಲ್ಲಿ ಇದ್ದ ಕಾರಣ ಕಾಲ್ ರಿಸೀವ್ ಮಾಡಲಾಗಲಿಲ್ಲ. ಕರೆ ಸ್ವೀಕರಿಸದಿದ್ದ ಕಾರಣ 'ತಾನು ರಾಹುಲ್ ಗಾಂಧಿಯವರ ಆಪ್ತ ಕಾರ್ಯದರ್ಶಿ ಕಾನಿಷ್ಕ ಸಿಂಗ್' ಎಂದು ಸಂದೇಶ ರವಾನೆಯಾಗಿತ್ತು.
ಈ ಬಗ್ಗೆ ಪರಿಶೀಲನೆ ನಡೆಸಿದಾಗ ಈ ಮೊಬೈಲ್ ಸಂಖ್ಯೆ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೆಸರಲ್ಲಿ ಟ್ರೂ ಕಾಲರ್ ನಲ್ಲಿ ಸೇವ್ ಆಗಿತ್ತು ಎಂದು ತಿಳಿದು ಬಂದಿದೆ. ಆ ಬಳಿಕ ಈ ಕರೆ ನಕಲಿಯೆಂದು ತಿಳಿದು ಬಂದಿರುವ ಕಾರಣ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಯು.ಟಿ. ಖಾದರ್ ಅವರು ದೂರು ನೀಡಿದ್ದಾರೆ.