Mangalore;ಗೋವುಗಳ ಕಾಳಜಿ ಬಗ್ಗೆ ಮಾತನಾಡುವ ಬಿಜೆಪಿ ಸರಕಾರ ಗೋಸೇವೆಯ ಹೆಸರಲ್ಲಿ ಲೂಟಿ ಮಾಡುತ್ತಿದೆ‌;ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕಿಡಿ

Mangalore;ಗೋವುಗಳ ಕಾಳಜಿ ಬಗ್ಗೆ ಮಾತನಾಡುವ ಬಿಜೆಪಿ ಸರಕಾರ ಗೋಸೇವೆಯ ಹೆಸರಲ್ಲಿ ಲೂಟಿ ಮಾಡುತ್ತಿದೆ‌;ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕಿಡಿ


ಮಂಗಳೂರು: ಗೋವುಗಳ ಕಾಳಜಿ ಬಗ್ಗೆ ಮಾತನಾಡುವ ಬಿಜೆಪಿ ಸರಕಾರ ಗೋಸೇವೆಯ ಹೆಸರಲ್ಲಿ ಲೂಟಿ ಮಾಡುತ್ತಿದೆ‌ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಕಿಡಿಕಾರಿದರು.

ಪಶುವೈದ್ಯಾಲಯಕ್ಕೆಂದು ಖರೀದಿಸಿರುವ ಆ್ಯಂಬುಲೆನ್ಸ್ ತುಕ್ಕು ಹಿಡಿಯುತ್ತಿದೆ.ಪಶು ವೈದ್ಯರ, ಆಂಬುಲೆನ್ಸ್ ಚಾಲಕರ ನೇಮಕವಾಗಿಲ್ಲ. ಎಲ್ಲದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಶುವೈದ್ಯರು ನಿವೃತ್ತರಾಗಿದ್ದರೂ, ಹೊಸ ನೇಮಕಾತಿಯಾಗಿಲ್ಲ. ಉಳ್ಳಾಲ ಕ್ಷೇತ್ರದಲ್ಲಿ ಹೊಸದಾಗಿ ಮೂರು ಕಟ್ಟಡಗಳು ನಿರ್ಮಾಣಗೊಂಡರೂ ಒಬ್ಬ ಪಶುವೈದ್ಯ, ಸಿಬ್ಬಂದಿಯ ಇಲ್ಲ ಎಂದರು. 

ಸರಕಾರ ಚರ್ಮಗಂಟು ರೋಗಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ರಾಜ್ಯದಲ್ಲಿ 21 ಸಾವಿರ ಜಾನುವಾರುಗಳು ಮೃತಪಟ್ಟಿವೆ. ವಿಧಾನಸಭೆಯಲ್ಲಿ ಹಸುಗಳ ಜನಗಣತಿ ಬಗ್ಗೆ ಮಾತನಾಡಿದಾಗ ಕಳೆದ ಮೂರು ವರ್ಷಗಳಲ್ಲಿ 2018 - 2022ರವರೆಗೆ 14 ಲಕ್ಷ ಹಸುಗಳು ಕಣ್ಮರೆಯಾಗಿದೆ. ಸಿದ್ದರಾಮಯ್ಯನವರು ಈ ಬಗ್ಗೆ ನಿಮ್ಮ ಸರಕಾರ ಬಂದು ಹಸುಗಳು ಎಲ್ಲಿ ಹೋಗಿದೆ ಎಂದರೆ ಬಿಜೆಪಿಯವರಿಂದ ಉತ್ತರ ಇಲ್ಲ.  ಸರಕಾರ ಇದ್ದಾಗ 8ಲಕ್ಷ ಲೀಟರ್ ಉತ್ಪಾದನೆ ಆಗುತ್ತಿದ್ದ ಹಾಲು 7 ಲಕ್ಷ ಲೀಟರ್ ಗೆ ಇಳಿದಿದೆ ಎಂದರು.

Ads on article

Advertise in articles 1

advertising articles 2

Advertise under the article