ಬಂಟ್ವಾಳ: ಕೇದಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ;ದೇವಶ್ಯ ಪಡೂರು ಸ್ಪಂದನ ಫ್ರೆಂಡ್ಸ್ ನ ಸ್ಪಂದನ ಗ್ರಾಮ ಸಂಭ್ರಮ ಕಾರ್ಯಕ್ರಮ

ಬಂಟ್ವಾಳ: ಕೇದಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ;ದೇವಶ್ಯ ಪಡೂರು ಸ್ಪಂದನ ಫ್ರೆಂಡ್ಸ್ ನ ಸ್ಪಂದನ ಗ್ರಾಮ ಸಂಭ್ರಮ ಕಾರ್ಯಕ್ರಮ

ಬಂಟ್ವಾಳ : ಬಂಟ್ವಾಳ ತಾಲೂಕು ದೇವಶ್ಯಪಡೂರು ಗ್ರಾಮದ ಕೇದಿಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಸ್ಪಂದನ ಫ್ರೆಂಡ್ಸ್ ದೇವಶ್ಯ ಪಡೂರು ವತಿಯಿಂದ ಸ್ಪಂದನ ಗ್ರಾಮ ಸಂಭ್ರಮ ಕಾರ್ಯಕ್ರಮ ನಡೆಯಿತು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿದ್ದರು.ಬಳಿಕ ಮಾತನಾಡಿ ಅವರು ಸರಕಾರದ ಜತೆಗೆ ಸಮುದಾಯ ಸಹಭಾಗಿತ್ವವಿದ್ದಾಗ ಶಾಲೆಗಳ ಅಭಿವೃದ್ಧಿ ಸಾಧ್ಯ. ಊರ ಸಂಘ, ಸಂಸ್ಥೆಗಳು ಶಾಲೆಗಳನ್ನು ದತ್ತು ಸ್ವೀಕರಿಸಿ ಅಭಿವೃದ್ಧಿ ಪಡಿಸುವತ್ತ ಮನಸ್ಸು ಮಾಡಬೇಕು. ಕೇದಿಗೆ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಸ್ಪಂದನ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ ವಾಗಿದ್ದು, ಮುಂದಕ್ಕೆ ಶಾಲೆಯನ್ನು ದತ್ತು ಪಡೆದರೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಆದಿರಾಜ್ ಜೈನ್ ಕೊಯಕುಡ್ಡೆ, ಪುಂಜಾಲಕಟ್ಟೆ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲ ಸಂತೋಷ್ ಎಸ್.ಸನಿಲ್, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನಾಮ ನಿರ್ದೇಶಿತ ನಿರ್ದೇಶಕ ಸುದರ್ಶನ್ ಬಜ, ಮಣಿನಾಲ್ಕೂರು ಗ್ರಾ.ಪಂ.ಸದಸ್ಯ ಶಾಂತಪ್ಪ ಪೂಜಾರಿ ಹಟದಡ್ಕ, ಪ್ರಗತಿಪರ ಕೃಷಿಕ ಶಾಂತಿ ಪ್ರಸಾದ್ ಜೈನ್ ಮರಾಯಿದೊಟ್ಟು, ಕಾವಳಪಡೂರು ಗ್ರಾ.ಪಂ.ಸದಸ್ಯ ಜಿನೇಂದ್ರ ಜೈನ್, ಸ್ಪಂದನ ಫ್ರೆಂಡ್ಸ್ ಅಧ್ಯಕ್ಷ ವಿನೀತ್ ಗಾಣಿಗ ಪೆರಿಯಾರ್‌ದೋಟ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್ ಕುಲಾಲ್, ಮುಖ್ಯ ಶಿಕ್ಷಕಿ ಶಾಂತಿ ಲೀನಾ ಪಾಯ್ಸ್ ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಪ್ಪ ನಲಿಕೆ ಹಾಗೂ ಶಾಲಾಭಿವೃದ್ಧಿ ಸಹಕರಿಸಿದ ಮನ್ಮಥರಾಜ್ ಜೈನ್ ಪೆರಿಯಾರ್‌ಗುತ್ತು, ಸಂಪತ್ ಸನಿಲ್ ಅಲ್ಲಿಪಾದೆ, ನವೀನ್ ಕುಲಾಲ್, ಅನಿಲ್ ಮರಾಯಿದೊಟ್ಟು, ಅನಿತಾ,ತನಿಯಪ್ಪ ಕೇದಿಗೆ,ಯಶೋಧರ ಮರಾಯಿದೊಟ್ಟು ಅವರನ್ನು ಸಮ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸ್ಪಂದನ ಫ್ರೆಂಡ್ಸ್ ಸಂಚಾಲಕ ಸಂಪತ್ ಸನಿಲ್ ಸ್ವಾಗತಿಸಿದರು. ಶಿಕ್ಷಕಿ ಜ್ಯೋತಿ ಸಮ್ಮಾನ ಪತ್ರ ವಾಚಿಸಿದರು.ಅನನ್ಯಾ ಪೆರಿಯಾರ್‌ದೋಟ ಹಾಗೂ ಗೌತಮ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿ, ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತಾಂಬೂಲ ಕಲಾವಿದರು ಪುಂಜಾಲಕಟ್ಟೆ ಇವರಿಂದ ಪರಿಮಳ ಕಾಲೊನಿ ತುಳು ನಾಟಕ ನಡೆಯಿತು.

ಬೆಳಗ್ಗೆ ಗ್ರಾಮ ಸಂಭ್ರಮದ ಪ್ರಯುಕ್ತ ಕ್ರೀಡಾಕೂಟ ನಡೆಯಿತು.ಅಂಗನವಾಡಿ,ಶಾಲಾ ಮಕ್ಕಳಿಗೆ, ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ದೆ ಏರ್ಪಡಿಸಲಾಗಿತ್ತು.

Ads on article

Advertise in articles 1

advertising articles 2

Advertise under the article