ಮಂಗಳೂರು: ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ಜನರನ್ನು‌ ಮರುಳು ಮಾಡಿ ಮಂಕುಬೂದಿ ಎರಚಿ, ಹೂವಿಟ್ಟೇ ದಿನದೂಡಿದ್ದಾರೆ. ಅವರಿನ್ನು ಶಾಶ್ವತವಾಗಿ ಕಿವಿಯಲ್ಲಿ ಹೂವಿಟ್ಟು ತಿರುಗಬೇಕು:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವ್ಯಂಗ್ಯ

ಮಂಗಳೂರು: ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ಜನರನ್ನು‌ ಮರುಳು ಮಾಡಿ ಮಂಕುಬೂದಿ ಎರಚಿ, ಹೂವಿಟ್ಟೇ ದಿನದೂಡಿದ್ದಾರೆ. ಅವರಿನ್ನು ಶಾಶ್ವತವಾಗಿ ಕಿವಿಯಲ್ಲಿ ಹೂವಿಟ್ಟು ತಿರುಗಬೇಕು:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವ್ಯಂಗ್ಯ

ಮಂಗಳೂರು: ಕಾಂಗ್ರೆಸ್ ಕಳೆದ 70 ವರ್ಷಗಳಲ್ಲಿ ಜನರನ್ನು‌ ಮರುಳು ಮಾಡಿ ಮಂಕುಬೂದಿ ಎರಚಿ, ಹೂವಿಟ್ಟೇ ದಿನದೂಡಿದ್ದಾರೆ. ಅವರಿನ್ನು ಶಾಶ್ವತವಾಗಿ ಕಿವಿಯಲ್ಲಿ ಹೂವಿಟ್ಟು ತಿರುಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವ್ಯಂಗ್ಯವಾಡಿದರು.

ರಾಜ್ಯ ಬಜೆಟ್ ಮಂಡನೆ ವೇಳೆ ವಿಧಾನಸಭೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿವಿಗೆ ಹೂವಿಟ್ಟುಕೊಂಡು ಬಂದಿರುವುದಕ್ಕೆ ಟಾಂಗ್ ನೀಡಿ, ಇಂದು ಸಿಎಂ ಬೊಮ್ಮಾಯಿಯವರು ಮಂಡಿಸಿರುವ ಬಜೆಟ್ ಸರ್ವತೋಮುಖ ಅಭಿವೃದ್ಧಿ ಪೂರಕ ಬಜೆಟ್. ಕೃಷಿಕರು, ಮಹಿಳೆಯರು, ಮತ್ತು ಯುವಕರ ಪರವಾದ ಬಜೆಟ್ ಎಂದು ಹೇಳಿದರು.

ಮೂರು ಲಕ್ಷ ಕೋಟಿಗೂ ಅಧಿಕವಾಗಿರುವ ಬಜೆಟ್ ಮಂಡನೆಯಾಗಿದೆ. ಇದು ಕೃಷಿಕನ ಕನಸಿನ ಬಜೆಟ್.‌ 5 ಲಕ್ಷ ರೂ.ವರೆಗೆ ರೈತರಿಗೆ ಬಡ್ಡಿ ರಹಿತ ಸಾಲ ಘೋಷಣೆಯಾಗಿದೆ. ಅಡಿಕೆ ಹಳದಿ, ಚುಕ್ಕಿ ರೋಗ ಸಂಶೋಧನೆಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕುಮ್ಕಿ, ಕಾನ, ಬಾಳ ಸಮಸ್ಯೆಗಳನ್ನು ಉಪ ಸಮಿತಿಗೆ ಒಪ್ಪಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ, ಪದವಿ ಪಡೆದವರಿಗೆ 2 ಸಾವಿರ ರೂ. ನೀಡುವ ಯೋಜನೆಯನ್ನು ಘೋಷಿಸಲಾಗಿದೆ.

ಹಳ್ಳಿಯ ಯುವಕರಿಗೆ ವಿವೇಕಾನಂದರ ಹೆಸರಿನಲ್ಲಿ ಸಾಲ ಯೋಜನೆ, ಸ್ವಯಂ ಉದ್ಯೋಗಕ್ಕೆ ಅವಕಾಶ ನೀಡಲಾಗಿದೆ‌. ಭೂ ರಹಿತ ಮಹಿಳೆಯರಿಗೆ 500 ರೂ., ಸ್ವಸಹಾಯ ಸಂಘಕ್ಕೆ ಸಾಲ ಯೋಜನೆ, ಸ್ತ್ರೀ ಸಬಲೀಕರಣಕ್ಕೆ ಶಕ್ತಿ ತುಂಬುವ ಕಾರ್ಯ ಬಜೆಟ್ ನಲ್ಲಿ ಆಗಿದೆ‌. ಆದ್ದರಿಂದ ಇದು ಜನಪರ ಮತ್ತು ಜನಸಾಮಾನ್ಯರ ಪರವಾದ ಬಜೆಟ್ ಆಗಿದೆ

ವಸತಿ ಯೋಜನೆ, ಮನೆ ಇಲ್ಲದವರಿಗೆ ಮನೆ ನೀಡುವ, ಶಿಕ್ಷಣ, ಉದ್ಯೋಗಕ್ಕೆ ಪೂರಕವಾದ ಯೋಜನೆಗಳನ್ನು ಹಾಕಲಾಗಿದೆ. ಆರೋಗ್ಯದಲ್ಲಿ ಪರಿವರ್ತನೆ ತರುವ ಕಾರ್ಯವನ್ನು ಸರ್ಕಾರ ಮಾಡಿದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಮಂಡನೆ ಮಾಡಿದ್ದಾರೆ‌.‌ ದ.ಕ.ಜಿಲ್ಲೆಗೆ ಗುರುಪುರ ನೇತ್ರಾವತಿ ನದಿಗೆ ಬಾರ್ಜ್ ಜೋಡನೆ ಮಾಡಲಾಗಿದೆ ಎಂದರು.

ಪಿಎಐ ಹಾಗೂ ಎಸ್ ಡಿಪಿಐಗೆ ಸಂಬಂಧವಿಲ್ಲ ಎನ್ನುತ್ತಿರುತ್ತಾರೆ. ಆದರೆ ಜೈಲಿನಲ್ಲಿರುವ ಶಾಫಿ ಬೆಳ್ಳಾರೆಗೆ ಎಸ್ ಡಿಪಿಐ ಚುನಾವಣೆಗೆ ಟಿಕೆಟ್ ಕೊಡುವ ಮೂಲಕ ಪಿಎಫ್ಐ ಎಸ್ ಡಿಪಿಐನ ಇನ್ನೊಂದು ಮುಖ ಎನ್ನುವುದು ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವದ ದೇಶದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ, ಜೈಲಿನಲ್ಲಿರುವವನಿಗೆ, ನಿಷೇಧಿತ ಪಿಎಫ್ಐ ಸಂಘಟನಾ ಸದಸ್ಯನನ್ನು ವ್ಯಕ್ತಿಯನ್ನು ಚುನಾವಣಾ ಕಣಕ್ಕಿಳಿಸಿರುವುದು ಸರಿಯಲ್ಲ‌. ಇದನ್ನು ನಾನು ವಿರೋಧಿಸುತ್ತೇನೆ. ಹಾಗೆಯೇ ಇದನ್ನು ಗೃಹ ಸಚಿವಾಲಯಕ್ಕೆ ತಿಳಿಸುತ್ತೇವೆ‌. ಇದರ ಬಗ್ಗೆ ಕಾಂಗ್ರೆಸ್ ಏನು ಹೇಳುತ್ತದೆ ಎಂದು ಪ್ರಶ್ನಿಸಿದರು.

Ads on article

Advertise in articles 1

advertising articles 2

Advertise under the article