ಮಂಗಳೂರು: ಬಸ್ ತಂಗುದಾಣದಲ್ಲಿ ನವಜಾತ ಶಿಶು ಪತ್ತೆ

ಮಂಗಳೂರು: ಬಸ್ ತಂಗುದಾಣದಲ್ಲಿ ನವಜಾತ ಶಿಶು ಪತ್ತೆ


ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಬಸ್ ತಂಗುದಾಣವೊಂದರಲ್ಲಿ ನವಜಾತ ಶಿಶುವೊಂದು ಗುರುವಾರ ಪತ್ತೆಯಾಗಿದೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

ಪಾಪಿ ತಾಯಿಯೊಬ್ಬಳು ಈ ನವಜಾತ ಗಂಡು ಶಿಶುವನ್ನು ತೊರೆದು ಹೋಗಿದ್ದಾಳೆ. ಈ ಶಿಶುವಿನ ತಲೆಯಲ್ಲಿ ಸಣ್ಣ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸರು  ಈ ಶಿಶುವನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಜನ್ಮತಳೆದು 10 ದಿನಗಳಾಗಿರುವ ಈ ಶಿಶುವಿನ ಆರೋಗ್ಯ ಸ್ಥಿರವಾಗಿರದ ಕಾರಣ ಐಸಿಯುನಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article