ಮಂಗಳೂರು: ಅಗಲಿದ ಯಕ್ಷಗಾನದ ಮೇರುಶಿಖರ 'ಬಲಿಪಜ್ಜ'ರಿಗೆ ಪ್ರಧಾನಿ ಮೋದಿ ಸಂತಾಪ
Thursday, February 16, 2023
ಮಂಗಳೂರು: ಯಕ್ಷಗಾನದ ಮೇರುಶಿಖರ, ಬಲಿಪ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿ
ನಿನ್ಬೆಯಷ್ಟೇ ಇಹಲೋಕದ ಯಾತ್ರೆ ಮುಗಿಸಿದ ಬಲಿಪ ನಾರಾಯಣ ಭಾಗವತರಿಗೆ ಪ್ರಧಾನಿ ಮೋದಿಯವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
'ಬಲಿಪ ನಾರಾಯಣ ಭಾಗವತರು ಸಾಂಸ್ಕೃತಿಕ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಯಕ್ಷಗಾನ ಭಾಗವತಿಕೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ಶೈಲಿಯಿಂದಲೇ ಕಲಾರಸಿಕರ ಮೆಚ್ಚುಗೆ ಪಡೆದರು. ಅವರು ಯಕ್ಷಗಾನದಲ್ಲಿ ಮಾಡಿರು ಕಾರ್ಯ ಮುಂದಿನ ಪೀಳಿಗೆಯವರಿಗೆ ದಾರಿದೀಪವಾಗಿದೆ. ಇಂತಹ ಬಲಿಪ ಭಾಗವತರ ನಿಧನದಿಂದ ನೋವು ತಂದಿದೆ. ಅವರ ಕುಟುಂಬಕ್ಕೆ ಸಂತಾಪ. ಓಂ ಶಾಂತಿ' ಎಂದು ಪ್ರಧಾನಿಮೋದಿಯವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.