ಸುರತ್ಕಲ್ ಬೈಕ್-ಕಾರು ಡಿಕ್ಕಿ ಹೈಡ್ರಾಮಾ: ಇತ್ತಂಡಗಳಿಂದ ದೂರು ದಾಖಲು
Thursday, February 9, 2023
ಸುರತ್ಕಲ್: ಇಲ್ಲಿನ ಗಣೇಶಪುರದಲ್ಲಿ ನಡೆದ ಬೈಕ್-ಕಾರು ಡಿಕ್ಕಿ ಹಾಗೂ ವಾಗ್ವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕೋಮುದ್ವೇಷಕ್ಕೆ ಬಲಿಯಾದ ಫಾಝೀಲ್ ಸಹೋದರ ಆದಿಲ್ ವಿರುದ್ಧ ದೂರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಗೇಶ್ ಎಂಬುವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
*ದೂರಿನಲ್ಲೇನಿದೆ?*
ಬುಧವಾರ ರಾತ್ರಿ ವೇಳೆ ಆದಿಲ್ ನಿರ್ಲಕ್ಷ್ಯವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಬಳಿಕ ಗಣೇಶಪುರದಲ್ಲಿ ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಆ ಬಳಿಕ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ. ಅಲ್ಲದೆ ಆದಿಲ್ ನೊಂದಿಗೆ ಆತನ ತಂದೆ ಉಮರ್ ಫಾರೂಕ್ ಹಾಗೂ ಅವರ ಸಂಬಂಧಿಕರೀರ್ವರೂ ತನಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಾಗೇಶ್ ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಬಗ್ಗೆ ಒಟ್ಟು ನಾಲ್ವರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
*ಪ್ರತಿದೂರು ದಾಖಲು*
ಇತ್ತ ಹತ್ಯೆಯಾದ ಫಾಝಿಲ್ ಸಹೋದರ ಆದಿಲ್ ರಿಂದಲೂ ಸುರತ್ಕಲ್ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ. ವಾಹನ ಡಿಕ್ಕಿಯ ಬಳಿಕ ವಾಗ್ವಾದ ಬೆಳೆದು ತನಗೂ ಹಲ್ಲೆ, ಕೊಲೆ ಬೆದರಿಕೆಯನ್ನೊಡ್ಡಲಾಗಿದೆ ಎಂದು ನಾಲ್ವರ ವಿರುದ್ಧ ದೂರು ದಾಖಲಾಗಿದೆ. ಸುರತ್ಕಲ್ ಠಾಣಾ ಪೊಲೀಸರು ಇತ್ತಂಡಗಳ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.