ಮಂಗಳೂರು: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ - ತಂದೆ ಮಗಳು ದಾರುಣ ಸಾವು
Saturday, March 18, 2023
ಮಂಗಳೂರು: ನಗರದ ನಂತೂರಿನಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ತಂದೆ - ಮಗಳು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟ ಘಟನೆ ಮಾರ್ಚ್ 17ರಂದು ಮಧ್ಯಾಹ್ನ ನಡೆದಿದೆ.
ಅತೀ ವೇಗದಿಂದ ಆಗಮಿಸಿದ ಟಿಪ್ಪರ್ ಲಾರಿ ಆ್ಯಕ್ಟಿವಾ ಹೋಂಡಾ ವಾಹನಕ್ಕೆ ಢಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ತಂದೆ ಮಗಳ ಮೇಲೆಯೇ ಲಾರಿ ಹರಿದು ಇಬ್ಬರೂ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ. ಲಾರಿ ಸ್ಕೂಟರ್ ಅನ್ನು ಅನತಿ ದೂರದವರೆಗೆ ಎಳೆದೊಯ್ದಿದೆ. ಪರಿಣಾಮ ಲಾರಿಯಡಿ ಸಿಲುಕಿ ತಂದೆ ಮಗಳಿಬ್ಬರೂ ಮೃತಪಟ್ಟಿದ್ದಾರೆ. ಈ ವೇಳೆ ಆಕ್ರೋಶಿತ ಸಾರ್ವಜನಿಕರು ಲಾರಿಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಈ ವೇಳೆ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕೆ ಎಸಿಪಿ ಗೀತಾ ಕುಲಕರ್ಣಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿದ್ದಾರೆ. ಸದ್ಯ ಪೊಲೀಸರು ಆರೋಪಿ ಲಾರಿ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.