ಆಟೋಚಾಲಕ ಪುರುಷೋತ್ತಮ ಪೂಜಾರಿ ಮೊಗದಲ್ಲಿ ಭರವಸೆಯ ಬೆಳಕು* *- ನೊಂದ ಮನಸ್ಸಿಗೆ ಆಸರೆಯಾದ ಪದ್ಮರಾಜ್* *- ಆಟೋ ಬಾಂಬ್ ಸ್ಪೋಟ ಸಂತ್ರಸ್ತನಿಗೆ ಸುಸಜ್ಜಿತ ಮನೆ ಸಿದ್ಧ*

ಆಟೋಚಾಲಕ ಪುರುಷೋತ್ತಮ ಪೂಜಾರಿ ಮೊಗದಲ್ಲಿ ಭರವಸೆಯ ಬೆಳಕು* *- ನೊಂದ ಮನಸ್ಸಿಗೆ ಆಸರೆಯಾದ ಪದ್ಮರಾಜ್* *- ಆಟೋ ಬಾಂಬ್ ಸ್ಪೋಟ ಸಂತ್ರಸ್ತನಿಗೆ ಸುಸಜ್ಜಿತ ಮನೆ ಸಿದ್ಧ*


 ಮಂಗಳೂರು: ಅಣ್ಣ ಇರೆಗ್ ಏರ್ ಇಜ್ಜಿಂಡಲ ಮಲ್ಲೆಜ್ಜಿ ಯಾನುಲ್ಲೆ, ಎಂಕ್ಲೆನಾ ಗುರುಬೆಳದಿಂಗಳು ಸಂಸ್ಥೆ ಉಂಡು... ಎನ್ನುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್  ನೀಡಿದ ಭರವಸೆಯ ಮಾತು ಆಟೋ ಕುಕ್ಕರ್‌ ಬಾಂಬ್ ಸ್ಪೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿಯವರ ಪಾಲಿಗೆ ಈಡೇರಿದ ಖುಷಿ... ಇದರಿಂದರ ಅವರ ಇಡೀ ಕುಟುಂಬ ಸದಸ್ಯರ ಮೊಗದಲ್ಲಿ ವಿಶ್ವಾಸದ ಬೆಳಕು ಮೂಡಿದೆ...

ಹೌದು ಇತ್ತೀಚೆಗೆ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡು ಗಾಯಗೊಂಡ ಆಟೋ ಚಾಲಕ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರನ್ನು ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಂಡದೊಂದಿಗೆ ಭೇಟಿಯಾದಾಗ ತನ್ನ ನೋವಿನ ಜತೆಗೆ ಬರುವ ಮೇ ತಿಂಗಳಿನಲ್ಲಿ ಮಗಳ ಮದುವೆ ನಿಗದಿಯಾಗಿದ್ದು, ಅದಕ್ಕಿಂತ ಮುನ್ನ ಮನೆ ನವೀಕರಣ ಮಾಡಬೇಕು ಎನ್ನುವ ನನ್ನ ಕನಸು ನನಸು ಮಾಡಲು ಸಾಧ್ಯವಾಗಿಲ್ಲ ಎಂಬ ನೋವಿನಿಂದ ಆತ್ಮವಿಶ್ವಾಸ ಕಳೆದುಕೊಂಡು ಮತ್ತಷ್ಟು ನೊಂದುಕೊಂಡು ದುಃಖವನ್ನು ವ್ಯಕ್ತಪಡಿಸಿದ್ದರು. ಈ ವೇಳೆ ಮನೆಯನ್ನು ನವೀಕರಿಸುವ ಜವಾಬ್ದಾರಿಯನ್ನು ಗುರುಬೆಳದಿಂಗಳು ಫೌಂಡೇಶನ್ ವಹಿಸಲಿದೆ. ನೀವು ಯಾವುದಕ್ಕೂ ಚಿಂತೆ ಮಾಡಬೇಡಿ. ಸರ್ಕಾರ ನಿಮಗೆ ಸ್ಪಂದಿಸದಿದ್ದರೂ ನಾವು ಸದಾ ನಿಮ್ಮೊಂದಿಗೆ ಇದ್ದೇವೆ ಎಂದು ಪದ್ಮರಾಜ್‌ರವರು ಅವರಿಗೆ ಮನೋಸ್ಥೈರ್ಯ ತುಂಬಿದ್ದರು. ಮಾತು ಕೊಟ್ಟ ಮರುದಿನದಿಂದಲೇ ಮನೆಯನ್ನು ಸುಸಜ್ಜಿತವಾಗಿ ನವೀಕರಿಸಲು ಪ್ರಾರಂಭಿಸಿದ ಸಂಸ್ಥೆ ಇದೀಗ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಂದರವಾಗಿ ಮನೆ ನಿರ್ಮಿಸಿಕೊಟ್ಟಿದೆ‌.. ಮಾರ್ಚ್ 22ರ ಯುಗಾದಿ ಹಬ್ಬದಂದು ಬೆಳಗ್ಗೆ 10 ಗಂಟೆಗೆ ಮನೆ ಹಸ್ತಾಂತರ ನಡೆಯಲಿದೆ.

*ನೊಂದವರ ಪಾಲಿಗೆ ಬೆಳದಿಂಗಳ ಆಸರೆ*

*ಗುರುಬೆಳದಿಂಗಳು ಭರವಸೆ ಮಾತ್ರವಲ್ಲ ನಂಬಿಕೆಯೂ, ವಿಶ್ವಾಸವೂ ಹೌದು*

Ads on article

Advertise in articles 1

advertising articles 2

Advertise under the article