ಮಂಗಳೂರು ಜುವೆಲ್ಲರಿ ಸಿಬ್ಬಂದಿ ಕೊಲೆ ಪ್ರಕರಣ - ಏಕೈಕ ಸಿಬ್ಬಂದಿ ಇರುವ ಚಿನ್ನದ ಮಳಿಗೆಯೇ ಹಂತಕನ ಟಾರ್ಗೆಟ್
Saturday, March 4, 2023
ಮಂಗಳೂರು: ನಗರದ ಮಂಗಳೂರು ಜುವೆಲ್ಲರಿ ಸಿಬ್ಬಂದಿ ಹಂತಕನಿಗೆ ಓರ್ವನೇ ಇರುವ ಚಿನ್ನದ ಮಳಿಗೆಯೇ ಟಾರ್ಗೆಟ್. ಖರೀದಿದಾರರು ಇಲ್ಲದೆ ಸಿಬ್ಬಂದಿಯೋರ್ವರೇ ಇರುವ ವೇಳೆ ಗ್ರಾಹಕನ ಸೋಗಿನಂತೆ ಬಂದು ಚಿನ್ನಾಭರಣ ದರೋಡೆ ನಡೆಸುತ್ತಿದ್ದ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಹೇಳಿದರು.
ಫೆ.3ರಂದು ಇದೇ ರೀತಿ ಗ್ರಾಹಕನ ಸೋಗಿನಲ್ಲಿ ಮಂಗಳೂರು ಜ್ಯುವೆಲ್ಲರಿಗೆ ಬಂದು ಸಿಬ್ಬಂದಿ ರಾಘವೇಂದ್ರ ಆಚಾರ್ಯರನ್ನು ಹತ್ಯೆಗೈದು ದರೋಡೆಗೆತ್ನಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಜ್ಯುವೆಲ್ಲರಿ ಮಾಲಕ ಆಗಮಿಸಿರುವ ಹಿನ್ನಲೆಯಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಸ್ವಲ್ಪ ದೂರ ನಡೆದು ಹೋದ ಈತ ಆ ಬಳಿಕ ರಿಕ್ಷಾ ಮೂಲಕ ಹೋಗಿರುವುದು ತಿಳಿದು ಬಂದಿದೆ. ಆ ಬಳಿಕ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ಆತನ ಫೋಟೊವನ್ನು ಬಿಡುಗಡೆ ಮಾಡಲಾಗಿತ್ತು. ಈ ಫೋಟೋದ ಆಧಾರದಲ್ಲಿ ಆತನನ್ನು ಕಾಸರಗೋಡು ಹಾಗೂ ಮಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ಬಂಧಿಸಿದ್ದಾರೆ.
ಆರೋಪಿ ಶಿಫಾಝ್ ಈ ಹಿಂದೆಯೂ ಇದೇ ರೀತಿ ದರೋಡೆ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ಪ್ರಕರಣವೂ ದೃಢಗೊಂಡಿಲ್ಲ. ಈತ ಕಪ್ಪು ಬಣ್ಣದ ಬಟ್ಟೆ ಹಾಗೂ ಬ್ಯಾಕ್ ಬ್ಯಾಗ್ ಅನ್ನೇ ಧರಿಸುತ್ತಿದ್ದು, ಈ ಆಧಾರದ ಮೇಲೆಯೇ ಪೊಲೀಸರು ಈತನನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಕೃತ್ಯ ಎಸಗಲು ಹೋಗುವ ವೇಳೆ 3-4 ಅಂಗಿಗಳನ್ನು ಧರಿಸಿ ಹೋಗುತ್ತಾನೆ. ರಕ್ತದ ಕಲೆಗಳಾದಲ್ಲಿ ಆ ಅಂಗಿಯನ್ನು ಎಸೆದು ಹೋಗುತ್ತಿದ್ದ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಆರೋಪಿಯ ಪತ್ತೆ ಮಾಡಿರುವ ಕಾಸರಗೋಡು ಪೊಲೀಸರು ಹಾಗೂ ಮಂಗಳೂರು ಪೊಲೀಸರ ತಂಡಕ್ಕೆ ಪೊಲೀಸ್ ಕಮಿಷನರ್ ಅಭಿನಂದನೆ ಸನ್ಮಾನ ಮಾಡಿದರು. ಅಲ್ಲದೆ ದಾಖಲೆ ಪತ್ರ ಹಾಗೂ 25 ಸಾವಿರ ರೂ. ಬಹುಮಾನ ನೀಡಿದರು.
Byte - ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್