ಮಂಗಳೂರು: ಕೆಲಸದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ - ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಕೆಲಸದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ - ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲು


ಮಂಗಳೂರು: ನಗರದ ಬಲ್ಮಠದಲ್ಲಿರುವ ಸಿ.ಎಸ್.ಐ.ಕೆ.ಎಸ್.ಡಿ ಸಭಾಪ್ರಾಂತದ ಉದ್ಯೋಗಿ ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಮಾನಸಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮಹಿಳೆ ಸೇರಿದಂತೆ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
 ರೇಶ್ಮಾ ಸೋನ್ಸ್(44) ಎಂಬವರು ಸಿ.ಎಸ್.ಐ.ಕೆ.ಎಸ್.ಡಿ ಸಭಾಪ್ರಾಂತದಲ್ಲಿ ಕಳೆದ 10 ವರ್ಷಗಳಲ್ಲಿ ಉದ್ಯೋಗಿಯಾಗಿದ್ದಾರೆ‌. ಆದರೆ ಇತ್ತೀಚಿನ ಒಂದು ವರ್ಷದಿಂದ ಸಿ.ಎಸ್.ಐ.ಕೆ.ಎಸ್.ಡಿ. ಬಲ್ಮಠದಲ್ಲಿರುವ ಖಜಾಂಜಿ ವಿನ್ಸಂಟ್ ಪಾಲನ್ನ ಮತ್ತು ಫಾ.ನೋಯೆಲ್ ಕರ್ಕೆಡರವರು ರೇಶ್ಮಾ ಸೊನ್ಸ್ ರವರಿಗೆ ದೈಹಿಕ , ಮಾನಸಿಕ  ಕಿರುಕುಳ ನೀಡಲಾರಂಭಿಸಿದ್ದಾರೆ. ಅವರು ತಮ್ಮ ದೇಹವನ್ನು ಮುಟ್ಟಿ ಲೈಗಿಂಕ ಕಿರುಕುಳ ನೀಡುವುದಲ್ಲದೆ ತಮ್ಮೊಂದಿಗೆ ದೈಹಿಕ ಸಂಪರ್ಕ ಹೊಂದಲು ಒತ್ತಾಯ ಪಡಿಸಿರುತ್ತಾರೆ. ಅಲ್ಲದೆ ಮೊಬೈಲ್ ನಲ್ಲಿ ಸೆಕ್ಸ್ ವಿಡಿಯೋ ನೋಡುವಂತೆ ಬಲವಂತ ಮಾಡಿರುತ್ತಾರೆ ಎಂದು ಮಹಿಳೆ ಆರೋಪಿಸಿದ್ದಾರೆ‌. 

ಅಲ್ಲದೆ ಸ್ಟೋರ್ ಕೀಪರ್ ಆಗಿರುವ ಮನೋಹರ ಅಮ್ಮನ್ನ  ಹಾಗೂ ಬಿಷಪ್ ಡ್ರೈವರ್ ಕರುಣಾಕರ ಕುಂದರ್ ರವರು  ರೇಶ್ಮಾ ಸೋನ್ಸ್ ರನ್ನು ಅವಾಚ್ಯ ಶಬ್ದಗಳಿಂದ ಬೈಯುತ್ತಿರುತ್ತಾರೆ. ಜೊತೆಗೆ ಸಿಸ್ಟರ್ ಸುಜಾತ ಮತ್ತು ಕಾರ್ಯದರ್ಶಿ ವಿಲ್ಲಿಯಂ ಕೇರಿರವರು ರೇಶ್ಮಾರವರನ್ನು ನೀನು ಮಹಿಳೆಯರ ಕುಲಕ್ಕೆ ಕಳಂಕ ಎಂದು ಬೈದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿರುತ್ತದೆ.

Ads on article

Advertise in articles 1

advertising articles 2

Advertise under the article