ಮಂಗಳೂರು: ಪಿಲಿಕುಳ ಮೃಗಾಲಯಕ್ಕೆ ಅಪರೂಪದ ಅತಿಥಿಗಳ ಆಗಮನ
Thursday, March 9, 2023
ಮಂಗಳೂರು: ನಗರದ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದ ಮೃಗಾಲಯಕ್ಕೆ ಹಲವಾರು ಅಪರೂಪದ ಅತಿಥಿಗಳ ಆಗಮನವಾಗಿದೆ. ಈ ಅತಿಥಿಗಳು ಈಗಾಗಲೇ ಸಾರ್ವಜನಿಕ ಪ್ರದರ್ಶನಕ್ಕೆ ಲಭ್ಯವಿದೆ.
ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿಯಿಂದ ವನ್ಯಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಮಹಾರಾಷ್ಟ್ರದ ನಾಗ್ ಪುರದ ಬಲಸಾಹೇಬ್ ಟಾಕರೆ ಗೋರೆವಾಡ ಅಂತಾರಾಷ್ಟ್ರೀಯ ಮೃಗಾಲಯದಿಂದ ಅಪರೂಪದ ಪ್ರಾಣಿಗಳನ್ನು ಪಿಲಿಕುಳ ಮೃಗಾಲಯಕ್ಕೆ ತರಿಸಲಾಗಿದೆ. 4 ಅಪರೂಪದ ಬಿಳಿಬಣ್ಣದ ಕೃಷ್ಣಮೃಗಗಳು ಹಾಗೂ ನಾಲ್ಕು ನೀಲ್ ಗೈಗಳನ್ನು ಆಗಮಿಸಿದೆ. ಜೊತೆಗೆ ಪಿಲಿಕುಳದಿಂದ 6 ರೆಟಿಕ್ಯುಲೇಟೆಡ್ ಹೆಬ್ಬಾವು ಹಾಗಯ ನಾಲ್ಕು ಗ್ರೇ ಮುಂಗುಸಿಗಳನ್ನು ವಿನಿಮಯ ಯೋಜನೆಯಡಿಯಲ್ಲಿ ನೀಡಲಾಗಿದೆ.
ಪಿಲಿಕುಳದಲ್ಲಿ ಈಗಾಗಲೇ 50 ಕೃಷ್ಣ ಮೃಗಗಳು, 25 ರೆಟಿಕ್ಯುಲೇಟೆಡ್ ಹೆಬ್ಬಾವುಗಳಿವೆ. ನೀಲ್ ಗೈಗಳು ಏಷ್ಯಾ ಖಂಡದಲ್ಲಿ ಕಾಣಸಿಗುವ ಅತೀ ದೊಡ್ಡದಾದ ಜಿಂಕೆ ಜಾತಿಗೆ ಸೇರಿದ ಮೃಗವಾಗಿದೆ ಎಂದು ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವದ ನಿರ್ದೇಶಕ ಹೆಚ್. ಜೆ. ಭಂಡಾರಿ ತಿಳಿಸಿದ್ದಾರೆ