ಮಂಗಳೂರು: ಗಂಟೆಗಳ ಕಾಲ ಕಾದು ಕುಳಿತರೂ ಸಿಗದ ಔಷಧಿ - ಆಸ್ಪತ್ರೆಯ ಮೆಡಿಕಲ್ ಸಿಬ್ಬಂದಿ ವಿರುದ್ಧ ವೀಡಿಯೋ ಮಾಡಿ ತರಾಟೆಗೆ
Tuesday, November 28, 2023
ಮಂಗಳೂರು: ಒಂದು ಗಂಟೆಗಳ ಕಾಲ ಕಾದು ಕುಳಿತರೂ ಔಷಧಿ ನೀಡಿಲ್ಲವೆಂದು ಆಕ್ರೋಶಗೊಂಡ ರೋಗಿಯ ಸಂಬಂಧಿಯೊಬ್ಬರು ವೀಡಿಯೋ ಮಾಡಿ ಆಸ್ಪತ್ರೆಯ ಮೆಡಿಕಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ಮೆಡಿಕಲ್‌ನಲ್ಲಿ ಸಿಬ್ಬಂದಿ ಬೇಜವಾಬ್ದಾರಿಯಿಂದ ಬೇಸತ್ತು ರೋಗಿಯ ಸಂಬಂಧಿಯೊಬ್ಬರು ವೀಡಿಯೋ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ರೋಗಿಗೆ ಅವಶ್ಯಕತೆ ಇರುವ ಔಷಧಿಗಾಗಿ ಅವರ ಸಂಬಂಧಿಕರು ಆಸ್ಪತ್ರೆಯ ಮೆಡಿಕಲ್ ಎದುರು ಕಾದು ಕುಳಿತಿದ್ದಾರೆ. ಆದರೆ ಅವರು ಗಂಟೆಗಳ ಕಾಲ ಕುಳಿತರೂ ಅವರಿಗೆ ದೊರಕಬೇಕಾದ ಔಷಧಿ ಸಿಬ್ಬಂದಿ ನೀಡಿರಲಿಲ್ಲ. ಆದ್ದರಿಂದ ರೋಗಿಯ ಸಂಬಂಧಿ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೀಡಿಯೋ ಮಾಡಿ ರೋಗಿಗೆ ಹೆಚ್ಚು ಕಮ್ಮಿ ಆದಲ್ಲಿ ನೀನೆ ಹೊಣೆ ಎಂದು ಮೆಡಿಕಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು ರೋಗಿಯ ಸಂಬಂಧಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಈ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.