ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇರಿಸಿ  ವಿಡಿಯೋ ರೆಕಾರ್ಡಿಂಗ್ ; ಬೆಂಗಳೂರು ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದ ಕಲಬುರಗಿಯ ಡರ್ಟಿ ಹೆಲ್ಪರ್‌ !

ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇರಿಸಿ ವಿಡಿಯೋ ರೆಕಾರ್ಡಿಂಗ್ ; ಬೆಂಗಳೂರು ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದ ಕಲಬುರಗಿಯ ಡರ್ಟಿ ಹೆಲ್ಪರ್‌ !

ಬೆಂಗಳೂರು, ನ 06: ಬನ್ನೇರುಘಟ್ಟ ಮುಖ್ಯರಸ್ತೆಯ ಪ್ರತಿಷ್ಠಿತ ಜಯದೇವ ಆಸ್ಪತ್ರೆಯ ನೆಲಮಹಡಿಯಲ್ಲಿರುವ ಮಹಿಳಾ ಶೌಚಾಲಯದ ಗೋಡೆ ಮೇಲೆ ರಹಸ್ಯವಾಗಿ ಮೊಬೈಲ್‌ ಕ್ಯಾಮೆರಾ ಇರಿಸಿ ಮಹಿಳೆಯರ ಅಶ್ಲೀಲ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಆರೋಪಿಯನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಮೂಲದ ಯಲ್ಲಾಲಿಂಗ (28) ಬಂಧಿತ. ಆರೋಪಿ ಅ.31ರಂದು ಬನ್ನೇರುಘಟ್ಟ ಮುಖ್ಯರಸ್ತೆಯ ಆಸ್ಪತ್ರೆಯ ನೆಲಮಹಡಿಯ ಮಹಿಳಾ ಶೌಚಾಲಯದ ಗೋಡೆ ಮೇಲೆ ರಹಸ್ಯವಾಗಿ ಮೊಬೈಲ್‌ ಇರಿಸಿ ಕ್ಯಾಮೆರಾ ಆನ್‌ ಮಾಡಿ ಮಹಿಳೆಯರ ವಿಡಿಯೋ ರೆಕಾರ್ಡ್‌ ಮಾಡುತ್ತಿದ್ದ. ಈ ಸಂಬಂಧ ಆಸ್ಪತ್ರೆಯ 35 ವರ್ಷದ ಮಹಿಳಾ ಸಿಬ್ಬಂದಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ

ಏನಿದು ಪ್ರಕರಣ?

ಆಸ್ಪತ್ರೆಯಲ್ಲಿ ವಾರ್ಡ್‌ ಹೆಲ್ಪರ್‌ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಅ.31ರಂದು ಬೆಳಗ್ಗೆ ಕೆಲಸಕ್ಕೆ ಹಾಜರಾಗಿದ್ದರು. ಬಳಿಕ ಆಸ್ಪತ್ರೆಯ ನೆಲಮಹಡಿಯಲ್ಲಿನ ಶೌಚಾಲಯಕ್ಕೆ ತೆರಳಿದ್ದು, ವಾಪಾಸ್‌ ಬರುವಾಗ ಶೌಚಾಲಯದ ಗೋಡೆ ಮೇಲೆ ಮೊಬೈಲ್‌ ಕಾಣಿಸಿದೆ. ಆ ಮೊಬೈಲ್‌ ಎತ್ತಿಕೊಂಡು ಪರಿಶೀಲಿಸಿದಾಗ ಖಾಸಗಿ ಅಂಗಾಂಗದ ವಿಡಿಯೋ ಸೆರೆಯಾಗಿರುವುದು ಕಂಡು ಬಂದಿದೆ. ಬಳಿಕ ಮೊಬೈಲ್‌ ತೆಗೆದುಕೊಂಡು ಹೊರಗೆ ಬಂದಾಗ, ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಾಲಿಂಗ ಓಡಿ ಬಂದು, ನನ್ನ ಮೊಬೈಲ್‌ ಕೊಡು ಅಕ್ಕ ಎಂದಿದ್ದಾನೆ. ಬಳಿಕ ಅಲ್ಲಿದ್ದ ಜನರು ಓಡಿ ಬಂದು ಯಲ್ಲಾಲಿಂಗನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಬಳಿಕ ಪೊಲೀಸರನ್ನು ಕರೆಸಿ ಆತನನ್ನು ವಶಕ್ಕೆ ನೀಡಿದ್ದಾರೆ.

ಎಫ್ಎಸ್‌ಎಲ್‌ಗೆ ಮೊಬೈಲ್‌ ರವಾನೆ ;

ಆರೋಪಿ ಕಳೆದ 6 ತಿಂಗಳಿಂದ ಗುತ್ತಿಗೆ ಆಧಾರದ ಮೇಲೆ ಆಸ್ಪತ್ರೆಗೆ ವಾರ್ಡ್‌ ಹೆಲ್ಪರ್‌ ಆಗಿ ಕೆಲಸಕ್ಕೆ ಸೇರಿದ್ದ. ಆತನ ಮೊಬೈಲ್‌ ಜಪ್ತಿ ಮಾಡಿದ್ದು, ಆತನ ಮೊಬೈಲ್‌ನಲ್ಲಿ ಒಂದು ಅಶ್ಲೀಲ ವಿಡಿಯೋ ಪತ್ತೆಯಾಗಿದೆ. ಸದ್ಯ ಆತನ ಮೊಬೈಲ್‌ ಅನ್ನು ಎಫ್ಎಸ್‌ಎಲ್ ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

Ads on article

Advertise in articles 1

advertising articles 2

Advertise under the article