ಮಂಗಳೂರು :ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್ ಚತುಷ್ಪಥ ರಸ್ತೆ ಕಾಂಕ್ರೀಟ್ ; ಫೆ.15ರಿಂದ ಜೂನ್ 15ರ ವರೆಗೆ ನಾಲ್ಕು ತಿಂಗಳ ಕಾಲ ಸಂಚಾರ ವ್ಯತ್ಯಯ..!!!

ಮಂಗಳೂರು :ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್ ಚತುಷ್ಪಥ ರಸ್ತೆ ಕಾಂಕ್ರೀಟ್ ; ಫೆ.15ರಿಂದ ಜೂನ್ 15ರ ವರೆಗೆ ನಾಲ್ಕು ತಿಂಗಳ ಕಾಲ ಸಂಚಾರ ವ್ಯತ್ಯಯ..!!!

ಮಂಗಳೂರು, ಫೆ.14: ಮಂಗಳೂರು ನಗರದ ಪಂಪ್‌ವೆಲ್ ಸರ್ಕಲ್‌ನಿಂದ ಕರಾವಳಿ ಜಂಕ್ಷನ್ ವರೆಗಿನ ಚತುಷ್ಪಥ ರಸ್ತೆಯ ಅಭಿವೃದ್ದಿ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ಫೆ.15 ರಿಂದ ಜೂನ್ 15ರ ವರೆಗೆ ನಾಲ್ಕು ತಿಂಗಳ ಕಾಲ ನಡೆಯಲಿದ್ದು ಈ ಅವಧಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. 

ಸಾರ್ವಜನಿಕ ಹಿತದೃಷ್ಟಿಯಿಂದ ಪಂಪುವೆಲ್ ವೃತ್ತದಿಂದ ಕಂಕನಾಡಿ ಹಳೆ ರಸ್ತೆ - ಕಂಕನಾಡಿ ಜಂಕ್ಷನ್‌ಗೆ (ಮಂಗಳೂರು ನಗರಕ್ಕೆ ಒಳಬರುವ ರಸ್ತೆ) ಮತ್ತು ಕರಾವಳಿ ಜಂಕ್ಷನ್‌ನಿಂದ ಪಂಪುವೆಲ್ ವೃತ್ತದ ವರೆಗಿನ (ಮಂಗಳೂರು ನಗರದಿಂದ ಹೊರ ಹೋಗುವ ರಸ್ತೆ) ಬೈಪಾಸ್ ರಸ್ತೆಗಳನ್ನು ತಾತ್ಕಾಲಿಕವಾಗಿ ಏಕಮುಖ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗಿದೆ. ಸದ್ರಿ ರಸ್ತೆಯಲ್ಲಿ ವಾಹನ ದಟ್ಟನೆ ಉಂಟಾಗುವ ಕಾರಣ ಸಾರ್ವಜನಿಕರು ಈ ಕೆಳಗಿನ ರಸ್ತೆಯನ್ನು ಉಪಯೋಗಿಸಲು ಸೂಚಿಸಲಾಗಿದೆ.  

ಪಂಪ್‌ವೆಲ್ ಜಂಕ್ಷನ್ ನಿಂದ ಕರಾವಳಿ ಜಂಕ್ಷನ್‌ಗೆ ಹೋಗುವ ವಾಹನಗಳನ್ನು ನಿರ್ಬಂಧಿಸಿ, ಕಂಕನಾಡಿ ಹಳೇ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಲಾಗಿದೆ. ತಲಪಾಡಿ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಪರ್ಯಾಯ ರಸ್ತೆಯಾದ ಮಹಾಕಾಳಿಪಡ್ಪು, ಮೋರ್ಗನ್ಸ್ ಗೇಟ್, ಕೋಟಿಚೆನ್ನಯ ಸರ್ಕಲ್ ಅಥವಾ ಮಂಗಳಾದೇವಿ ಮುಖಾಂತರ ಸಂಚರಿಸುವುದು.

ಬಿ.ಸಿ ರೋಡ್ ಕಡೆಯಿಂದ ಬರುವಂತಹ ಭಾರೀ ವಾಹನಗಳು, ಇತರೆ ವಾಹನಗಳು ಮತ್ತು ಲಾಲ್‌ಬಾಗ್ ಬಸ್ಸು ನಿಲ್ದಾಣಕ್ಕೆ ತೆರಳುವ KSRTC ಬಸ್ಸುಗಳು ಪಡೀಲ್ ಜಂಕ್ಷನ್‌ನಿಂದ ನಂತೂರು ಕಡೆಗೆ ಹಾಗೂ ಕೇರಳ-ಕಾಸರಗೋಡು ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಬರುವ ಭಾರಿ ವಾಹನಗಳು ಮತ್ತು KSRTC ಬಸ್ಸುಗಳು ಪಂಪ್‌ವೆಲ್ ಜಂಕ್ಷನ್ ನಿಂದ ನಂತೂರು ಕಡೆಗೆ ಸಂಚರಿಸುವುದು. 

ಮಂಗಳೂರು ನಗರದ ಒಳಭಾಗದಿಂದ ಕರಾವಳಿ ಜಂಕ್ಷನ್ ಕಡೆಯಿಂದ ಪಂಪುವೆಲ್ ಕಡೆಗೆ ಸಂಚರಿಸುವ ವಾಹನಗಳು ಯಥವಾತ್ತಾಗಿ ಸಂಚರಿಸುವುದು. 

ಕಂಕನಾಡಿ ಜಂಕ್ಷನ್-ಪಂಪುವೆಲ್ ರಸ್ತೆ(ಕಂಕನಾಡಿ ಓಲ್ಡ್ ರಸ್ತೆ), ಕರಾವಳಿ-ಕಂಕನಾಡಿ ರಸ್ತೆ, ಕಂಕನಾಡಿ-ಫಳ್ನೀರ್ ಹೈಲ್ಯಾಂಡ್ ಆಸ್ಪತ್ರೆ ರಸ್ತೆ, ಕರಾವಳಿ-ಬಲ್ಮಠ ರಸ್ತೆ ಹಾಗೂ ಕಂಕನಾಡಿ ಬೈಪಾಸ್ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ.

ಸದರಿ ಕಾಮಗಾರಿ ಮತ್ತು ಮಾರ್ಗ ಬದಲಾವಣೆ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಗಳು ಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿಸಲಾಗಿದೆ.

Ads on article

Advertise in articles 1

advertising articles 2

Advertise under the article