ಬೆಂಗಳೂರು :ಮನೆಗೆ ಚೆನ್ನಾಗಿ ಬಿಸಿಲು ಬೀಳುತ್ತೆ ಎಂದು ಬೆಂಗಳೂರಲ್ಲಿ 80 ಸಾವಿರ ಬಾಡಿಗೆ ಕೇಳಿದ ಮಾಲೀಕ! ಮಹಿಳೆ ಶಾಕ್..!!

ಬೆಂಗಳೂರು :ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿ ಬದುಕುವುದೇ ದೊಡ್ಡ ಸವಾಲು. ಮನೆ ಮಾಲೀಕರು ದೊಡ್ಡ ಠೇವಣಿ, ಹೆಚ್ಚಿನ ಬಾಡಿಗೆ ಅಥವಾ ಹೆಚ್ಚುವರಿ ಶುಲ್ಕವನ್ನು ಕೇಳುವುದು ಮಾಮುಲಿಯಾಗಿದೆ. ಆದರೆ ಮನೆ ಮಾಲೀಕರು ತಿಂಗಳ ಬಾಡಿಗೆ ಸಾವಿರ ಅಲ್ಲ, ಲಕ್ಷ ರೂ ಹೇಳ್ತಾರೆ. ಆದರೆ ಬೆಂಗಳೂರಿನಲ್ಲಿ ಮನೆಯನ್ನು ಹುಡುಕುತ್ತಿರುವಾಗ ಎದುರಾದ ಅನಿರೀಕ್ಷಿತ ಘಟನೆಯ ಬಗ್ಗೆ ವಿವರಿಸಿದ್ದಾರೆ. ಮನೆ ಹೇಗಿದೆ ಎಂದು ನೋಡಲು ಒಂದು ತಿಂಗಳ ಬಾಡಿಗೆ ನೀಡಬೇಕೆಂದ ಮನೆ ಮಾಲೀಕರ ವಿಚಿತ್ರ ಬೇಡಿಕೆ ಕಂಡು ಶಾಕ್ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
ಅನು ಎಂಬುವವರು ಎಕ್ಸ್ (ಹಿಂದಿನ ಟ್ವಿಟರ್) ವೇದಿಕೆಯಲ್ಲಿ ಈ ಪೋಸ್ಟ್ ಶೇರ್ ಮಾಡಿದ್ದಾರೆ. ಅವರು ಫ್ಲಾಟ್ ಒಂದನ್ನು ಬಾಡಿಗೆಗೆ ಪಡೆಯಲು ಹೋದಾಗ, ಮನೆ ಮಾಲೀಕರು ಆ ಮನೆಯಲ್ಲಿ ‘ಉತ್ತಮ ನೈಸರ್ಗಿಕ ಬೆಳಕು ಮತ್ತು ಬಿಸಿಲು’ ಬರುತ್ತದೆ ಎನ್ನುವ ಕಾರಣ ನೀಡಿ 80,000 ರೂ. ಬಾಡಿಗೆ ನಿಗದಿಪಡಿಸಿದ್ದಾರೆ.
ಈ ಹಿಂದೆ ಯಾವುದೇ ಮನೆಯ ಮೂಲಭೂತ ಅವಶ್ಯಕತೆ ಎಂದು ಪರಿಗಣಿಸಲಾಗುತ್ತಿದ್ದ ಗಾಳಿ ಮತ್ತು ಬೆಳಕನ್ನು ಈಗ ‘ಪ್ರೀಮಿಯಂ ಅಮೆನಿಟಿ’ ಅಥವಾ ಐಷಾರಾಮಿ ಸೌಲಭ್ಯ ಎಂದು ಬಿಂಬಿಸಲಾಗುತ್ತಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, 80,000 ರೂ. ಬಾಡಿಗೆ ಕಟ್ಟುವ ಬದಲು ಅಷ್ಟೇ ಮೊತ್ತದ ಸಾಲದ ಕಂತನ್ನು ಕಟ್ಟಿ ಸ್ವಂತ ಮನೆ ಖರೀದಿಸುವುದೇ ಲೇಸು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ರೀತಿ ನಿರಂತರವಾಗಿ ಏರುತ್ತಿರುವ ಬಾಡಿಗೆ ಮತ್ತು ಅವಾಸ್ತವಿಕ ಡೆಪಾಸಿಟ್ ಬೇಡಿಕೆಗಳು ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಹೊರೆಯಾಗುತ್ತಿದೆ.