ಬೆಂಗಳೂರು :ದಂಪತಿಗೆ ಎರಡನೇ ಪ್ರೆಗ್ನೆನ್ಸಿ ಫೋಟೋಶೂಟ್ ಸಡಗರ ; ಮೂರು ವರ್ಷದ ಮೊದಲ ಮಗು ನೀರಿನ ಪೂಲ್‌ಗೆ ಬಿದ್ದು ದುರಂತ..!!

ಬೆಂಗಳೂರು :ದಂಪತಿಗೆ ಎರಡನೇ ಪ್ರೆಗ್ನೆನ್ಸಿ ಫೋಟೋಶೂಟ್ ಸಡಗರ ; ಮೂರು ವರ್ಷದ ಮೊದಲ ಮಗು ನೀರಿನ ಪೂಲ್‌ಗೆ ಬಿದ್ದು ದುರಂತ..!!

ಬೆಂಗಳೂರು, ಫೆ.15: ಎರಡನೇ ಮಗುವನ್ನು ಬರಮಾಡಿಕೊಳ್ಳುವ ಸಂತಸದ ಕ್ಷಣವನ್ನು ಸಂಭ್ರಮಿಸಲು ತೆರಳಿದ್ದ ದಂಪತಿಗೆ ದುರಂತ ಎದುರಾಗಿದೆ. ಎರಡನೇ ಮಗುವಿನ ಗರ್ಭ ಧರಿಸಿದ್ದ ಪತ್ನಿಯ ಪ್ರೆಗ್ನೆನ್ಸಿ ಫೋಟೋಶೂಟ್ ವೇಳೆ ಅವರ ಮೂರು ವರ್ಷದ ಮೊದಲ ಮಗು ನೀರಿನ ಪೂಲ್‌ಗೆ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ.

ಎರಡನೇ ಮಗುವಿನ ಆಗಮನದ ಖುಷಿಯಲ್ಲಿ ದಂಪತಿ ಫೋಟೋಶೂಟ್ ವ್ಯವಸ್ಥೆ ಮಾಡಿಕೊಂಡಿದ್ದರು. ಫೋಟೋ ಶೂಟ್ ನಡೆಯುತ್ತಿದ್ದ ಸಂದರ್ಭದಲ್ಲಿ ಮಗುವನ್ನು ಸಮೀಪದಲ್ಲೇ ಆಟವಾಡಲು ಬಿಡಲಾಗಿತ್ತು. ಈ ವೇಳೆ ಗಮನಿಸದ ಕಾರಣ ಮಗು ಅಲ್ಲೇ ಇದ್ದ ಸಣ್ಣ ನೀರಿನ ಪೂಲ್‌ಗೆ ಬಿದ್ದಿದ್ದು, ಕೆಲ ಹೊತ್ತಿನ ಬಳಿಕ ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರೂ, ಆಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಘಟನೆ ಕುಟುಂಬದವರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article