ಬೆಂಗಳೂರು :ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ ಗೆ ಬೆಂಗಳೂರಿನ ಬ್ರೂವರಿಯ ಮುಂದೆ ತಾಸುಗಟ್ಟಲೆ ಕಾದು ನಿಂತ ಪ್ರೇಮಿಗಳು..!!

ಬೆಂಗಳೂರು :ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ ಗೆ ಬೆಂಗಳೂರಿನ ಬ್ರೂವರಿಯ ಮುಂದೆ ತಾಸುಗಟ್ಟಲೆ ಕಾದು ನಿಂತ ಪ್ರೇಮಿಗಳು..!!

ಬೆಂಗಳೂರು :ವ್ಯಾಲೆಂಟೈನ್ಸ್ ಡೇ ಸಂಭ್ರಮಿಸಲು ಯೋಜಿಸಿದ್ದ ನೂರಾರು ಜೋಡಿಗಳಿಗೆ ಬೆಂಗಳೂರಿನ ಜನಪ್ರಿಯ ಬ್ರೂವರಿ ನಿರಾಶೆ ಮೂಡಿಸಿತು.ವ್ಯಾಲೆಂಟೈನ್ಸ್ ಡೇ ವೇಳೆ ಗ್ರಾಹಕರಿಗೆ ಭಾರಿ ನಿರಾಸೆಯುಂಟಾಗಿದೆ. ಟೇಬಲ್‌ಗಳನ್ನು ಅತಿಯಾಗಿ ಬುಕ್ ಮಾಡಿದ್ದರಿಂದ ಜೋಡಿಗಳು ಗಂಟೆಗಳ ಕಾಲ ಸಾಲಿನಲ್ಲಿ ಕಾದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಅಕ್ಷಯ್ ಕುಮಾವತ್ ಎಂಬ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾಮರ್ಥ್ಯಕ್ಕಿಂತ ಹೆಚ್ಚು ಟೇಬಲ್ ಬುಕ್ ಮಾಡಿದಾಗ ಏನಾಗುತ್ತದೆ ನೋಡಿ ಎಂಬ ಶೀರ್ಷಿಕೆ ನೀಡಿದ್ದಾರೆ.

ಈವಿಡಿಯೋದಲ್ಲಿ ನೂರಾರು ಜೋಡಿಗಳು ಚಳಿಯಲ್ಲಿ ಮಳಿಗೆಯ ಹೊರಗೆ ಉದ್ದನೆಯ ಸಾಲಿನಲ್ಲಿ ಕಾಯುತ್ತಿರುವುದು ಕಂಡುಬಂದಿದೆ. ಟೇಬಲ್ ರಿಸರ್ವೇಶನ್ ಮಾಡಿದ್ದರೂ ಸಹ ಸೀಟು ಸಿಗದೆ ಕೋಪ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ, ಒಬ್ಬ ವ್ಯಕ್ತಿಗೆ ತಲಾ 2,000 ರೂ. ವರೆಗೆ ಭಾರಿ ಪ್ರಮಾಣದ ಕವರ್ ಚಾರ್ಜ್ ವಸೂಲಿ ಮಾಡಲಾಗಿತ್ತು. ಇಷ್ಟೊಂದು ಹಣ ನೀಡಿದರೂ ಸರಿಯಾದ ವ್ಯವಸ್ಥೆ ಇರಲಿಲ್ಲ ಎಂಬುದು ಗ್ರಾಹಕರ ದೂರು. ಸೀಟು ಸಿಗದೆ ಹಿಂತಿರುಗಿದ ಅನೇಕ ಗ್ರಾಹಕರು ತಾವು ಪಾವತಿಸಿದ ಹಣವನ್ನು ಮರಳಿ ಪಡೆಯಲು ಬ್ರೂವರಿ ಸಿಬ್ಬಂದಿಯೊಂದಿಗೆ ಹರಸಾಹಸ ಪಡಬೇಕಾಯಿತು.ಫೆಬ್ರವರಿ 15ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ನೆಟ್ಟಿಗರು ಬ್ರೂವರಿಯ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

Ads on article

Advertise in articles 1

advertising articles 2

Advertise under the article