ಉತ್ತರ ಪ್ರದೇಶ :ಆನ್ ಲೈನ್ ಗೇಮ್ ಚಟಕ್ಕೆ ಮೂವರು ಅಪಾಪ್ತ ಸಹೋದರಿಯರು ಆತ್ಮ*ಹತ್ಯೆ...!!

ಉತ್ತರ ಪ್ರದೇಶ: ಆನ್’ಲೈನ್ ಗೇಮ್ ಚಟಕ್ಕೆ ಅತಿಯಾಗಿ ದಾಸರಾಗಿದ್ದನ್ನು ಪೋಷಕರು ವಿರೋಧಿಸಿದ ಹಿನ್ನೆಲೆಯಲ್ಲಿ, ಮೂವರು ಅಪ್ರಾಪ್ತ ಸಹೋದರಿಯರು ವಸತಿ ಸಂಕೀರ್ಣದ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಘಾಸಿಯಾಬಾದ್ನಲ್ಲಿ ನಡೆದಿದೆ.
ಮೃತರನ್ನು ಪಾಖಿ (16), ಪ್ರಾಚಿ (14) ಮತ್ತು ವಿಶಿಕಾ (12) ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಈ ಮೂವರು ಬಾಲಕಿಯರು ಆನ್ಲೈನ್ ಗೇಮಿಂಗ್ಗೆ ತೀವ್ರವಾಗಿ ವ್ಯಸನಿಗಳಾಗಿದ್ದರು. ಪೋಷಕರು ಈ ಅಭ್ಯಾಸವನ್ನು ಆಕ್ಷೇಪಿಸಿದ್ದೇ ಈ ತೀವ್ರ ನಿರ್ಧಾರಕ್ಕೆ ಪ್ರಚೋದನೆ ನೀಡಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸರ ತನಿಖೆಯ ಪ್ರಕಾರ, ಈ ಬಾಲಕಿಯರು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಆನ್ಲೈನ್ ಗೇಮಿಂಗ್ಗೆ ಮಾರುಹೋಗಿದ್ದರು. ಅವರು ವಿಶೇಷವಾಗಿ ಕೊರಿಯನ್ ಮೂಲದ ಕಾರ್ಡ್ ಆಧಾರಿತ (tas-based) ಲವರ್ ಗೇಮ್ ಒಂದನ್ನು ಆಡುತ್ತಿದ್ದರು ಎನ್ನಲಾಗಿದೆ. ಈ ಗೇಮಿಂಗ್ ಚಟದಿಂದಾಗಿ ಅವರು ಶಾಲೆಗೂ ಸರಿಯಾಗಿ ಹೋಗುತ್ತಿರಲಿಲ್ಲ ಎಂದು ವರದಿಯಾಗಿದೆ.ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಈ ಆತ್ಮಹತ್ಯೆಯ ಹಿಂದಿನ ನಿಖರವಾದ ಕಾರಣಗಳನ್ನು ಪತ್ತೆಹಚ್ಚಲು ತನಿಖೆಯನ್ನು ನಡೆಸುತ್ತಿದ್ದಾರೆ.