ಬೆಂಗಳೂರು :ಹೆತ್ತ ತಂದೆ-ತಾಯಿಯನ್ನೇ ಕೊಂದ ಮಗ;ಅಸಲಿ ಕಾರಣವೇನು?

ಬೆಂಗಳೂರು :ಹೆತ್ತ ತಂದೆ-ತಾಯಿಯನ್ನೇ ಕೊಂದ ಮಗ;ಅಸಲಿ ಕಾರಣವೇನು?

ಬೆಂಗಳೂರು: ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನವೀನ್ ಚಂದ್ರ ಭಟ್(60), ಡಾ.ಶ್ಯಾಮಲಾ ಭಟ್(55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ಆಗಿದ್ದರೆ, ಡಾ.ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು.

ಮಕ್ಕಳಿಗೆ ತಂದೆ-ತಾಯಿ ಬೈಯೋದು ಸಾಮಾನ್ಯವಾಗಿದೆ. ತಂದೆ-ತಾಯಿ ಬೈಗುಳಕ್ಕೆ ಬೇಸತ್ತು ಅಪ್ಪ-ಅಮ್ಮನನ್ನು ಮಗನೇ ಕೊಲೆಗೈದಿರುವ ಘಟನೆ ಆಘಾತಕಾರಿಯಾಗಿದೆ. ಪೋಷಕರ ಬೈಗುಳಕ್ಕೆ ಬೇಸತ್ತು ರೋಹನ್ ಚಂದ್ರ ಭಟ್ ಈ ಬರ್ಬರ ಕೃತ್ಯವೆಸಗಿದ್ದಾನೆ ಎನ್ನಲಾಗ್ತಿದೆ.

ಆರೋಪಿ ರೋಹನ್ ಚಂದ್ರ ಭಟ್ ನನ್ನು ಆತನ ತಂದೆ-ತಾಯಿ ಕೆಲಸಗಾರರ ಮುಂದೆ ಬೈದು ಅವಮಾನ ಮಾಡ್ತಿದ್ದರಂತೆ. ಅಲ್ಲದೇ ಪ್ರತೀ ನಿತ್ಯ ಬೈದು ಬೈದು ಹಿಂಸೆ ನೀಡ್ತಿದ್ದರು. ಹೀಗಾಗಿ ಕೊಲೆಗೈದಿರೋದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿ ರೋಹನ್ ಚಂದ್ರ ಬಾಯ್ಬಿಟ್ಟಿದ್ದಾನೆ ಎನ್ನಲಾಗ್ತಿದೆ.

Ads on article

Advertise in articles 1

advertising articles 2

Advertise under the article