ಬೆಳ್ತಂಗಡಿ :ಶಾಲಾ ಮಕ್ಕಳನ್ನು ತೆರದ ಟಿಪ್ಪರ್ ನಲ್ಲಿ ಪ್ರವಾಸ ಕರೆದೊಯ್ದ ಶಿಕ್ಷಕರು ! ಬಳೆಂಜ ಗ್ರಾಮದಲ್ಲಿ ಅಪಾಯಕಾರಿ ಘಟನೆ..!!
Thursday, February 12, 2026

ಮಂಗಳೂರು : ಜೇನು ಕೃಷಿ ಅಧ್ಯಯನ ಪ್ರವಾಸ ನೆಪದಲ್ಲಿ ಶಾಲಾ ಮಕ್ಕಳನ್ನು ತೆರೆದ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಅಪಾಯಕಾರಿ ರೀತಿ ಕರೆದೊಯ್ದ ಘಟನೆ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ನಡೆದಿದೆ.
ಬಳೆಂಜ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಅವರು ಶಾಲಾ ಮಕ್ಕಳನ್ನು ಜೇನು ಕೃಷಿ ಅಧ್ಯಯನಕ್ಕೆಂದು ತೆರೆದ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ನಾಲ್ಕೂರು ಬಳಿಯ ಅನಿಲ್ ಫಾರ್ಮ್ ಗೆ ಮಕ್ಕಳನ್ನು ಕರೆದುಕೊಂಡು ಹೋಗಲಾಗಿದೆ. ಆದರೆ ಸಣ್ಣ ಮಕ್ಕಳನ್ನು ತೆರೆದ ಟಿಪ್ಪರ್ ನಲ್ಲಿ ಮಣ್ಣು ತುಂಬಿಸಿದ ರೀತಿ ಕರೆದೊಯ್ದಿದ್ದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ಟಿಪ್ಪರ್ ಅಪಘಾತಗಳಾದರೆ ಅದರಿಂದ ಮಕ್ಕಳು ಅಪಾಯಕ್ಕೀಡಾದರೆ ಯಾರು ಹೊಣೆಯೆಂದು ಜನರು ಪ್ರಶ್ನೆ ಮಾಡಿದ್ದಾರೆ.


ಹೀಗಾಗಿ, ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸಿದ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಹಾಗು ಎರಡು ವಾಹನ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.