ಭುವನೇಶ್ವರ:ಮನೆ ಟೆರೇಸ್ ಮೇಲೆ ಬಾಂಬ್ ತಯಾರಿಸುವಾಗ ಸ್ಪೋಟಗೊಂಡು ತಾಯಿ-ಮಗ ಸಾವು..!!!

ಭುವನೇಶ್ವರ:ಮನೆ ಟೆರೇಸ್ ಮೇಲೆ ಬಾಂಬ್ ತಯಾರಿಸುವಾಗ ಸ್ಪೋಟಗೊಂಡು ತಾಯಿ-ಮಗ ಸಾವು..!!!

ಭುವನೇಶ್ವರ : ಮನೆಯ ಟರೇಸ್ ಮೇಲೆ ಬಾಂಬ್ ತಯಾರಿಸುತ್ತಿದ್ದಾಗಲೇ ಬಾಂಬ್ ಸ್ಪೋಟಗೊಂಡು ತಾಯಿ, ಮಗ ಸಾವನ್ನಪ್ಪಿರುವ ಘಟನೆ ಒಡಿಶಾದಲ್ಲಿ ನಡೆದಿದೆ.ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದೆ.

ತೀವ್ರ ಗಾಯಗೊಂಡಿದ್ದ ಕ್ರಿಮಿನಲ್ ಹಾಗೂ ರೌಡಿ ಶೀಟರ್‌ 26 ವರ್ಷದ ಸೆಹ್ನಾಜ್ ಮಲಿಕ್ ಫೆಬ್ರವರಿ 4 ರಂದು ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದ. ಇದಾಗಿ ಕೆಲವು ದಿನಗಳ ನಂತರ ಇದೇ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನ ತಾಯಿ 51 ವರ್ಷದ ಲಿಜಾತುನ್ ಬೀಬಿ ಫೆಬ್ರವರಿ 10 ರಂದು ಕಟಕ್‌ನ ಎಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಮಲಿಕ್‌ನ ಗೆಳತಿ 23 ವರ್ಷದ ತೃಪ್ತಿಮಯಿ ಮಹಲ್ ಹಾಗೂ ಸಹಚರ 27 ವರ್ಷದ ಅಮಿಯಾ ಮಲ್ಲಿಕ್ ಅವರು ಭುವನೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಸ್ಫೋಟದ ತೀವ್ರತೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬಲವಾದ ಕಂಪನ ಉಂಟಾಗಿ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದರು ಎಂದು ದೃಶ್ಯಗಳು ತೋರಿಸುತ್ತವೆ.

ಬಾಂಬ್‌ಗಳನ್ನು ಸಿದ್ಧಪಡಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಈ ಘಟನೆಯಲ್ಲಿ ಸಾವನ್ನಪ್ಪಿದ ಸೆಹ್ನಾಜ್ ಮಲಿಕ್ ವಿರುದ್ಧ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವು ಸೇರಿದಂತೆ ಏಳು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.

Ads on article

Advertise in articles 1

advertising articles 2

Advertise under the article