ಮಂಡ್ಯ :ತಾಯಿ ಎದುರೇ ಕಾವೇರಿ ನದಿಗೆ ಹಾರಿದ ಮಗಳು! ಟೆಕ್ಕಿ ಜೀವ ಕಳೆದುಕೊಂಡಿದ್ದೇಕೆ?

ಮಂಡ್ಯ :ತಾಯಿ ಎದುರೇ ಕಾವೇರಿ ನದಿಗೆ ಹಾರಿದ ಮಗಳು! ಟೆಕ್ಕಿ ಜೀವ ಕಳೆದುಕೊಂಡಿದ್ದೇಕೆ?

ಶ್ರೀರಂಗಪಟ್ಟಣ(ಮಂಡ್ಯ): ತಾಲೂಕಿನ ಕೆ.ಆರ್.ಸಾಗರದ ಬೃಂದಾವನ ಸಮೀಪದ ಬಸ್ ನಿಲ್ದಾಣದ ಬಳಿಯ ಕಾವೇರಿ ನದಿಗೆ ಯುವತಿಯೊಬ್ಬಳು ತನ್ನ ತಾಯಿ ಎದುರೇ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೈಸೂರು ನಗರದ ರಾಮಕೃಷ್ಣ ನಗರದ ನಿವಾಸಿ ಕಾಳೇಗೌಡ ಎಂಬುವರ ಪುತ್ರಿ 27 ವರ್ಷದ ಕುಸುಮಾಂಜಲಿ ಆತ್ಮಹತ್ಯೆ ಮಾಡಿಕೊಂಡವರು.

ಸಾಪ್ಟ್ವೇರ್ ಇಂಜಿನಿಯರ್ ಆಗಿದ್ದ ಕುಸುಮಾಂಜಿಲಿ ಮಾನಸಿಕ ಒತ್ತಡದಲ್ಕಿದ್ದಳು ಎಂದು ತಾಯಿ ತಿಳಿಸಿದ್ದು, ತನ್ನ ತಾಯಿ ವೀಣಾ ಅವರನ್ನ ಬೃಂದಾವನ ವೀಕ್ಷಿಸಲು ಹೋಗೋಣ ಎಂದು ಒತ್ತಾಯಿಸಿ, ಸ್ಕೂಟರ್‌ನಲ್ಲಿ ಬಂದಿದ್ದಾರೆ.

ಈ ಸಂದರ್ಭದಲ್ಲಿ ಹರಿಯುವ ನೀರಿನ ಜತೆ ನಿಂತು ಪೋಟ ತೆಗೆದುಕೊಳ್ಳುವುದಾಗಿ ತಿಳಿಸಿ ಏಕಾಏಕಿ ತಾಯಿ ಮುಂದೆಯೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಗಳ ಸಾವನ್ನು ಕಣ್ಣಾರೆ ಕಂಡು ಮಗಳನ್ನು ಬದುಕಿಸುವಂತೆ ಸ್ಥಳದಲ್ಲಿ ತಾಯಿಯ ಗೋಳಾಟ ಮುಗಿಲು ಮುಟ್ಟುವಂತಿತ್ತು. ಸಹಾಯಕ್ಕೆ ಬಂದವರು ನೀರಿನ ರಭಸಕ್ಕೆ ನದಿಗಿಳಿಯಲು ಹಿಂದೇಟು ಹಾಕಿದ್ದಾರೆ.

ವಿಷಯ ತಿಳಿದ ಕೆ.ಆರ್.ಸಾಗರ ಪೊಲೀಸ್ ಸ್ಥಳಕ್ಕಾಗಿಮಿಸಿ, ಪರಿಶೀಲನೆ ನಡೆಸಿ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ತಂಡದವರು ನದಿಯಿಂದ ಮೃತ ದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Ads on article

Advertise in articles 1

advertising articles 2

Advertise under the article