ಬೆಂಗಳೂರು :ಶರವೇಗದಲ್ಲಿ ಏರುತ್ತಿದೆ ಕೋಳಿ ಮೊಟ್ಟೆ ಬೆಲೆ: ಎಥೆನಾಲ್ ತಂದಿಟ್ಟ ಸಂಕಷ್ಟಕ್ಕೆ ಗ್ರಾಹಕರು ಕಂಗಾಲು..!
Friday, August 28, 2026

ಬೆಂಗಳೂರು :ಮಾರುಕಟ್ಟೆಯಲ್ಲಿ ಕೋಳಿ ಆಹಾರದ ಬೆಲೆ ಗಗನಕ್ಕೇರುತ್ತಿರುವ ಪರಿಣಾಮ, ದಿನನಿತ್ಯದ ಅಗತ್ಯ ವಸ್ತುವಾಗಿರುವ ಕೋಳಿ ಮೊಟ್ಟೆಗಳ ದರ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಾಣುತ್ತಿದೆ. ಕೋಳಿಗಳಿಗೆ ಪ್ರಮುಖ ಆಹಾರವಾಗಿರುವ ಮೆಕ್ಕೆಜೋಳ ಮತ್ತು ಸೋಯಾಬೀನ್ ಹಿಂಡಿಯ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿರುವುದೇ ಈ ದರ ಹೆಚ್ಚಳಕ್ಕೆ ಮುಖ್ಯ ಕಾರಣ ಎಂದು ಕೋಳಿ ಸಾಕಾಣಿಕೆ ಉದ್ಯಮದ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಕೇಂದ್ರ ಸರ್ಕಾರದ ನೀತಿಯಂತೆ ಹೆಚ್ಚಿನ ಪ್ರಮಾಣದ ಮೆಕ್ಕೆಜೋಳವನ್ನು ಎಥೆನಾಲ್ ಉತ್ಪಾದನೆಗಾಗಿ ಬಳಕೆ ಮಾಡುತ್ತಿರುವುದರಿಂದ, ಕೋಳಿ ಫಾರಂಗಳಿಗೆ ಲಭ್ಯವಾಗಬೇಕಿದ್ದ ಮೆಕ್ಕೆಜೋಳದ ಪೂರೈಕೆಯಲ್ಲಿ ಭಾರಿ ಅಭಾವ ಸೃಷ್ಟಿಯಾಗಿದೆ.
ಇದರಿಂದಾಗಿ ಕೋಳಿ ಆಹಾರದ ಮೇಲಿನ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಅನಿವಾರ್ಯವಾಗಿ ಮೊಟ್ಟೆಗಳ ಬೆಲೆಯನ್ನು ಏರಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ವರದಿಗಳು ಹೇಳಿವೆ.