ದೆಹಲಿ :ನಾನ್ ನಿಮ್ಮನ್ನ ಮುಟ್ಟ ಬಹುದೇ ಪ್ಲೀಸ್?”: ಬಾಲಕಿಯ ಆಸೆಗೆ ಪ್ರಧಾನಿ ಮೋದಿ ಕೊಟ್ಟ ಕ್ಯೂಟ್ ರಿಯಾಕ್ಷನ್ ವೈರಲ್..!!

ದೆಹಲಿ :ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಪುಟ್ಟ ಮಕ್ಕಳೊಂದಿಗೆ ರಕ್ಷಾಬಂಧನ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ವಾತ್ಸಲ್ಯದಿಂದ ಆಚರಿಸಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಮುದ್ದು ಮಕ್ಕಳು ಪ್ರಧಾನಿಯವರಿಗೆ ರಾಖಿ ಕಟ್ಟಿ, ತಮ್ಮ ಮುಗ್ಧ ಪ್ರಶ್ನೆಗಳ ಮೂಲಕ ಅವರೊಂದಿಗೆ ಆತ್ಮೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಈ ಸುಂದರ ಕ್ಷಣಗಳ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ಕಾರ್ಯಕ್ರಮದಲ್ಲಿದ್ದ ಬಾಲಕಿಯೊಬ್ಬಳು ಮೋದಿ ಹಾಗೂ ಅವರ ದಿವಂಗತ ತಾಯಿ ಹೀರಾಬೆನ್ ಅವರ ಭಾವಚಿತ್ರವಿದ್ದ ವಿಶೇಷ ರಾಖಿ ಕಟ್ಟಿ ಗಮನ ಸೆಳೆದರೆ, ಎನ್‌ಸಿಸಿ ಕೆಡೆಟ್‌ಗಳು ಶಿಸ್ತಿನಿಂದ ಸಲ್ಯೂಟ್ ಮಾಡಿ ಶುಭ ಹಾರೈಸಿದರು.
ಇನ್ನೊಬ್ಬ ಬಾಲಕಿ ತಲೆ ಮುಟ್ಟುವ ಆಸೆ ವ್ಯಕ್ತಪಡಿಸಿದಾಗ ಮೋದಿ ಸಮ್ಮತಿಸಿ ಮುದ್ದಿಸಿದರು. ಹಾಗೆಯೇ ‘ನಿಮ್ಮ ನೆಚ್ಚಿನ ಬಣ್ಣ ಯಾವುದು?’ ಎಂಬ ಪ್ರಶ್ನೆಗೆ “ನೀನು ಇವತ್ತು ಹಳದಿ ಡ್ರೆಸ್ ಹಾಕಿದ್ದೀಯಾ, ಅದಕ್ಕೇ ಹಳದಿ!” ಎಂದು ತಮಾಷೆಯಾಗಿ ಉತ್ತರಿಸಿ ರಂಜಿಸಿದರು. ಮಕ್ಕಳ ಪ್ರತಿಯೊಂದು ಪ್ರಶ್ನೆಗೂ ಮೋದಿ ತೋರಿದ ಪ್ರೀತಿ ಮತ್ತು ತಾಳ್ಮೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.