ಬೆಂಗಳೂರು :LIST ​ಕರ್ನಾಟಕದಲ್ಲಿ SIR ಸಮೀಕ್ಷೆಯ ಮೊದಲ ಹಂತ ಪೂರ್ಣ: 1.08 ಕೋಟಿ ಮತದಾರರು ASDDO ವರ್ಗಕ್ಕೆ! ಆತಂಕ ಬೇಡ ಎಂದ ಚುನಾವಣಾ ಆಯೋಗ.

ಬೆಂಗಳೂರು :LIST ​ಕರ್ನಾಟಕದಲ್ಲಿ SIR ಸಮೀಕ್ಷೆಯ ಮೊದಲ ಹಂತ ಪೂರ್ಣ: 1.08 ಕೋಟಿ ಮತದಾರರು ASDDO ವರ್ಗಕ್ಕೆ! ಆತಂಕ ಬೇಡ ಎಂದ ಚುನಾವಣಾ ಆಯೋಗ.

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ‘ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ’ (SIR) ಪ್ರಕ್ರಿಯೆಯ ಮೊದಲ ಹಂತವಾದ ಮನೆ-ಮನೆ ಸಮೀಕ್ಷೆ ಮತ್ತು ಗಣತಿ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಒಟ್ಟು 5.54 ಕೋಟಿ ನಮೂನೆಗಳ ಪೈಕಿ ಶೇ. 80.46 ರಷ್ಟು (4.46 ಕೋಟಿ) ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದೆ.

ಈ ಪ್ರಕ್ರಿಯೆಯಲ್ಲಿ ರಾಜ್ಯದ ಒಟ್ಟು 1,08,31,945 (ಶೇ. 19.54) ಮತದಾರರನ್ನು ASDDO ವರ್ಗದಲ್ಲಿ ಗುರುತಿಸಲಾಗಿದೆ. ಆದರೆ ಈ ಪಟ್ಟಿಗೆ ಸೇರ್ಪಡೆಯಾದ ತಕ್ಷಣಕ್ಕೆ ಹೆಸರುಗಳನ್ನು ವಜಾಗೊಳಿಸಲಾಗಿದೆ ಎಂದರ್ಥವಲ್ಲ; ಮುಂದಿನ ಹಂತದ ದಾಖಲೆ ಪರಿಶೀಲನೆ ಹಾಗೂ ಆಕ್ಷೇಪಣೆಗಳ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ASDDO ವರ್ಗೀಕರಣದ ವಿವರಗಳು:

ಶಾಶ್ವತವಾಗಿ ಸ್ಥಳಾಂತರಗೊಂಡವರು: 65,61,607

ಪತ್ತೆಯಾಗದ/ ಗೈರುಹಾಜರಾದವರು: ಮೃತಪಟ್ಟ ಮತದಾರರು: 16,38,839

​15,28,985

ಈಗಾಗಲೇ ದಾಖಲಾಗಿರುವವರು: 7,07,792

ಇತರ ಕಾರಣಗಳು: 3,94,722

​(ರಾಜಧಾನಿ ಬೆಂಗಳೂರಿನಲ್ಲಿ 1.08 ಕೋಟಿ ಮತದಾರರ ಪೈಕಿ 56.73 ಲಕ್ಷ ಮಂದಿಯ ವಿವರ ಡಿಜಿಟಲೀಕರಣಗೊಂಡಿದ್ದು, ಉಳಿದ 47.15 ಲಕ್ಷ ಮತದಾರರು ASDDO ಪಟ್ಟಿಯಲ್ಲಿದ್ದಾರೆ.)

ಮುಂದಿನ ಪ್ರಮುಖ ದಿನಾಂಕಗಳು:

​ಆಗಸ್ಟ್ 24, 2026: ಕರಡು ಮತದಾರರ ಪಟ್ಟಿ ಪ್ರಕಟಣೆ.

​ಸೆಪ್ಟೆಂಬರ್ 23, 2026 ರವರೆಗೆ: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ.

​ಅಕ್ಟೋಬರ್ 22, 2026 ರವರೆಗೆ: ಸಲ್ಲಿಸಿದ ಆಕ್ಷೇಪಣೆಗಳ ಪರಿಶೀಲನೆ ಹಾಗೂ ವಿಲೇವಾರಿ.

​ಅಕ್ಟೋಬರ್ 10, 2026: ಅಂತಿಮ ಮತದಾರರ ಪಟ್ಟಿ ಪ್ರಕಟಣೆ.

​ಕರಡು ಪಟ್ಟಿ ಪ್ರಕಟವಾದ ಬಳಿಕ ಮತದಾರರು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿಕೊಳ್ಳಬಹುದು. ಹೆಸರು ಬಿಟ್ಟುಹೋಗಿದ್ದರೆ ಅಥವಾ ಲೋಪಗಳಿದ್ದರೆ ನಿಗದಿತ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಲು ಅವಕಾಶವಿದೆ.

 


Ads on article

Advertise in articles 1

advertising articles 2

Advertise under the article