ಗುಜರಾತ್ :ಪುತ್ರಿಯನ್ನು ಕೊಂದು ಫ್ರಿಡ್ಜ್‌ನಲ್ಲಿಟ್ಟ ತಂದೆ: ಕೊನೆಗೆ ಆತ ಮಾಡಿದ್ದೇನು?

ಗುಜರಾತ್: ಆರ್ಥಿಕ ಬಿಕ್ಕಟ್ಟಿನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ 40 ವರ್ಷದ ವ್ಯಕ್ತಿಯೊಬ್ಬ ತನ್ನ ಐದು ವರ್ಷದ ಪುತ್ರಿಯನ್ನು ಉಸಿರುಗಟ್ಟಿಸಿ ಕೊಂದು, ಆಕೆಯ ಮೃತದೇಹವನ್ನು ಫ್ರಿಡ್ಜ್‌ನಲ್ಲಿರಿಸಿ ತಾನು ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.
ಮೃತ ಕಿಶೋರ್ ಧನಕ್ ತಾನು ಸತ್ತ ನಂತರ ಮಗಳು ಒಂಟಿಯಾಗಿ ತೊಂದರೆ ಅನುಭವಿಸಬಾರದು ಎಂಬ ಕಾರಣಕ್ಕೆ ಈ ಕೃತ್ಯ ಎಸಗಿರುವುದಾಗಿ ಮೂರು ಆತ್ಮಹತ್ಯಾ ಪತ್ರಗಳಲ್ಲಿ ಬರೆದಿಟ್ಟಿದ್ದಾನೆ. ಕೃತ್ಯಕ್ಕೂ ಮುನ್ನ ಕೊಠಡಿಯನ್ನು ಬಲೂನುಗಳು ಮತ್ತು ಮೇಣದಬತ್ತಿಗಳಿಂದ ಅಲಂಕರಿಸಿ, ಮಗಳಿಗೆ ಬಿಳಿ ಬಟ್ಟೆ ತೊಡಿಸಿ, ಚಾಕೊಲೇಟ್‌ಗಳನ್ನಿಟ್ಟು ಪೂಜೆ ಸಲ್ಲಿಸಿದ್ದ. ಮೃತ ಕಿಶೋರ್‌ಗೆ ಸ್ನೇಹಿತರಿಂದ ₹7.25 ಲಕ್ಷ ಹಣ ಬರಬೇಕಿದ್ದು, ಅದು ಕೈಸೇರದೆ ಸಾಲದ ಸುಳಿಗೆ ಸಿಲುಕಿದ್ದರು. ಪತ್ನಿ ಮಂಜುಬೆನ್ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿದ್ದು, ಬಾಗಿಲು ಒಡೆದು ನೋಡಿದಾಗ ಕೃತ್ಯ ಬಯಲಾಗಿದೆ. ಘಟನೆ ಸಂಬಂಧ ಪೊಲೀಸರು ಕೊಲೆ (BNS 103(1)) ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.