ಬೆಂಗಳೂರು :ನಾಪತ್ತೆಯಾಗಿದ್ದ ಇಬ್ಬರೂ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಮದುವೆ! ಒಬ್ಬಳು ಗರ್ಭಿಣಿ. missing case student pregnancy pocso file

ಬೆಂಗಳೂರು :ನಾಪತ್ತೆಯಾಗಿದ್ದ ಇಬ್ಬರೂ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಮದುವೆ! ಒಬ್ಬಳು ಗರ್ಭಿಣಿ. missing case student pregnancy pocso file

ಬೆಂಗಳೂರು: ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಮನೆಯಿಂದ ಕಾಲೇಜಿಗೆ ತೆರಳಿ ನಾಪತ್ತೆಯಾಗಿದ್ದ ಇಬ್ಬರೂ ಪಿಯುಸಿ ವಿದ್ಯಾರ್ಥಿನಿಯರನ್ನು ಬರೋಬ್ಬರಿ ಎಂಟು ತಿಂಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಸಿಐಡಿ (CID) ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.


ಜನವರಿ 31ರಂದು ನಾಪತ್ತೆಯಾಗಿದ್ದ ಇಬ್ಬರೂ ಯುವತಿಯರು ಹಸೆಮಣೆ ಏರಿದ್ದು, ಅವರಲ್ಲಿ ಓರ್ವಳು ಗರ್ಭಿಣಿಯಾಗಿದ್ದಾಳೆ ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಾದಪ್ಪನ ಬೆಟ್ಟದಿಂದ ಶುರುವಾದ ಜಾಲ:

ಮನೆಯಿಂದ ಓಡಿಹೋಗಿದ್ದ ವಿದ್ಯಾರ್ಥಿನಿಯರು ನೇರವಾಗಿ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರು. ಅಲ್ಲಿ ಕನಕಪುರ ಮೂಲದ ಯುವಕನೊಬ್ಬನಿಗೆ ತಾವು ಅನಾಥರು ಎಂದು ನಂಬಿಸಿ ಆತನ ಜೊತೆ ತೆರಳಿದ್ದರು. ಆ ಪೈಕಿ ತನಿಷ್ಕಾ ಎಂಬಾಕೆಯನ್ನು ಅದೇ ಯುವಕ ಮದುವೆಯಾಗಿದ್ದ.

ಸಿಐಡಿಗೆ ಸಿಕ್ಕಿದ್ದು ಹೇಗೆ ಸುಳಿವು?:

​ತಾಯಿ ಕಾರ್ಡ್ ಮಾಡಿಸಲು ಹೋಗಿ ಸಿಕ್ಕಿಬಿದ್ದಳು: ಮದುವೆಯಾಗಿ ಗರ್ಭಿಣಿಯಾಗಿದ್ದ ತನಿಷ್ಕಾ ಇತ್ತೀಚೆಗೆ ತಾಯಿ ಕಾರ್ಡ್ ಮಾಡಿಸಲು ಆಧಾರ್ ಸಂಖ್ಯೆ ನೀಡಿದ್ದಳು. ಆಧಾರ್ ಲಿಂಕ್ ಆಗುತ್ತಿದ್ದಂತೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಿ ಆಕೆಯನ್ನು ಎರಡು ದಿನಗಳ ಹಿಂದೆ ವಶಕ್ಕೆ ಪಡೆಯಲಾಗಿತ್ತು.

​ಮತ್ತೋರ್ವ ಯುವತಿ ಸೂರ್ಯಸಿಟಿಯಲ್ಲಿ ಪತ್ತೆ: ಆಕೆಯ ನೀಡಿದ ಸುಳಿವಿನ ಮೇರೆಗೆ ಕಾರ್ಯಾಚರಣೆ ಮುಂದುವರಿಸಿದ ಸಿಐಡಿ, ಆನೇಕಲ್ ಬಳಿಯ ಸೂರ್ಯಸಿಟಿಯ ಶೆಡ್‌ನಲ್ಲಿ 26 ವರ್ಷದ ವಿಜಯ್ ಎಂಬಾತನ ಜತೆ ವಾಸವಿದ್ದ ಮತ್ತೋರ್ವ ಯುವತಿಯನ್ನು ಪತ್ತೆ ಹಚ್ಚಿದ್ದಾರೆ.

ಪೋಕ್ಸೋ ಪ್ರಕರಣ ದಾಖಲು:

ಯುವತಿಗೆ 18 ವರ್ಷ ತುಂಬಿದೆ ಎಂದು ಭಾವಿಸಿ ಮದುವೆಯಾಗಿದ್ದಾಗಿ ಯುವಕ ವಿಜಯ್ ತಿಳಿಸಿದ್ದಾನೆ. ಪ್ರಸ್ತುತ ಅಪ್ರಾಪ್ತೆಯನ್ನು ಮದುವೆಯಾದ ಹಿನ್ನೆಲೆಯಲ್ಲಿ ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಸಿಐಡಿ ಅಧಿಕಾರಿಗಳು ಯುವತಿಯನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಿದ್ದು, ಪೋಷಕರ ಸುಪರ್ದಿಗೆ ನೀಡಲು ಕ್ರಮ ಕೈಗೊಂಡಿದ್ದಾರೆ.

 

Ads on article

Advertise in articles 1

advertising articles 2

Advertise under the article