ನವದೆಹಲಿ :ಫ್ಲೈದುಬೈ ವಿಮಾನ ಅಪಹರಣ ಯತ್ನದ ವೇಳೆ ತೋರಿದ ಸಾಹಸಕ್ಕಾಗಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್‌ಗೆ ಇಸ್ರೇಲ್‌ನ ಅಧ್ಯಕ್ಷೀಯ ಪ್ರಶಸ್ತಿ...

ಪ್ರಶಸ್ತಿ ಸ್ವೀಕರಿಸಿದವರನ್ನು ಉದ್ದೇಶಿಸಿ ಮಾತನಾಡಿದ ಹರ್ಜೋಗ್, ಇಂದು ನಾವು ಗೌರವಿಸುತ್ತಿರುವ ಇಸ್ರೇಲಿ ವೀರರೊಂದಿಗೆ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚರ್, ಸಂಪೂರ್ಣವಾಗಿ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಹೃತ್ಪೂರ್ವಕವಾಗಿ ಹಾರೈಸುತ್ತೇವೆ. ಕ್ಯಾಪ್ಟನ್ ಮಚ್ಚರ್ ಅವರ ಅಪಾರ ಧೈರ್ಯ ಮತ್ತು ವೃತ್ತಿಪರತೆಯು ಈ ದುರಂತವನ್ನು ತಪ್ಪಿಸಲು ಸಹಾಯ ಮಾಡಿತು. ಅವರು ಚೇತರಿಸಿಕೊಂಡ ನಂತರ, ಇಸ್ರೇಲ್ ಜನರ ಪರವಾಗಿ ಅವರಿಗೆ 'ನಾಗರಿಕ ಸಾಹಸಕ್ಕಾಗಿ ಇಸ್ರೇಲ್‌ನ ಅಧ್ಯಕ್ಷೀಯ ಪ್ರಶಸ್ತಿ' ನೀಡಿ ಗೌರವಿಸಲಾಗುವುದು. ಇದು ನನಗೆ ಗೌರವ ಮತ್ತು ಸೌಭಾಗ್ಯದ ವಿಷಯವಾಗಿರುತ್ತದೆ ಎಂದೂ ಹೇಳಿದ್ದಾರೆ.
'ದಿ ಜೆರುಸಲೆಮ್ ಪೋಸ್ಟ್' ಮತ್ತು 'ದಿ ಟೈಮ್ಸ್ ಆಫ್ ಇಸ್ರೇಲ್' ವರದಿ ಉಲ್ಲೇಖಿಸಿ ಎಎನ್‌ಐ ಸುದ್ದಿ ಬಿತ್ತರಿಸಿರುವಂತೆ ಅಪಹರಣದ ಯತ್ನವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರು ಇಸ್ರೇಲಿ ನಾಗರಿಕರಾದ ತಾಲಿ ಮಾನೆಸ್, ಜ್ವಿಕಾ ಮಾನೆಸ್, ಯನಿವ್ ಹಯೌನ್, ಡಾ. ಶೋಟಾ ಮುಸಾಯೆವ್, ಅಸಫ್ ರಾಜುವಾನ್ ಮತ್ತು ಓರ್ ಪಾರ್ಡಿಲೋವ್ ಅವರಿಗೂ ಹರ್ಜೋಗ್ ಪ್ರಶಸ್ತಿ ಪ್ರದಾನ ಮಾಡಿದರು.
ಸೆಪ್ಟೆಂಬರ್ 30 ರಂದು ವಿಮಾನದಲ್ಲಿ ಸಹ - ಪೈಲಟ್‌ನೊಂದಿಗೆ ನಡೆದ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕ್ಯಾಪ್ಟನ್ ಮಚ್ಚರ್, ಪ್ರಸ್ತುತ ಅಬುಧಾಬಿಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತೀಯ ಪೈಲಟ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಮತ್ತು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಬುಧವಾರ ತಿಳಿಸಿದ್ದರು.
ನವದೆಹಲಿಯಲ್ಲಿ ನಡೆದ ದ್ವಿ-ಸಾಪ್ತಾಹಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜೈಸ್ವಾಲ್, ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪೈಲಟ್, ಅವರ ಕುಟುಂಬ, ಸ್ಥಳೀಯ ಅಧಿಕಾರಿಗಳು ಮತ್ತು ಅವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಹೇಳಿದರು.
ಕ್ಯಾಪ್ಟನ್ ಮಚ್ಚರ್ ಅಬುಧಾಬಿಯ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತಲೇ ಬಂದಿದ್ದೇವೆ. ಯುಎಇಯಲ್ಲಿರುವ ನಮ್ಮ ರಾಯಭಾರ ಕಚೇರಿಯು ಅವರು, ಅವರ ಕುಟುಂಬ ಹಾಗೂ ಸ್ಥಳೀಯ ಮತ್ತು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಮತ್ತು ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.